ಉಪನ್ಯಾಸ, ಕರಪತ್ರ ವಿತರಣೆ ಹಾಗೂ ಪ್ರಬಂಧ ಸ್ಪರ್ಧೆ
ವಿದ್ಯಾರ್ಥಿ ಜೀವನದಿಂದಲೇ ಸ್ವಚ್ಛತೆಯನ್ನು ಮೈಗೂಡಿಸಿ ಕೊಂಡರೆ ಅದು ಇತರರಿಗೆ ಮಾದರಿ : ಅಧಿಕಾರಿ ರಾಯಿಲ್

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಸುಳ್ಯ ಇದರ ವತಿಯಿಂದ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜನೆ ಗೊಂಡಿರುವ ಸ್ವಚ್ಛತಾ ಆಂದೋಲನ ಮಾಸಾಚರಣೆಯ ಪ್ರಯುಕ್ತ ಜಟ್ಚಿಪ್ಪಳ್ಳ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉಪನ್ಯಾಸ, ಕರಪತ್ರ ವಿತರಣೆ ಹಾಗೂ ಪ್ರಬಂಧ ಸ್ಪರ್ಧೆ ನವಂಬರ್ 12ರಂದು ನಡೆಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ಮು ಅನ್ಸಾರ್ ಅದ್ಯಕ್ಷರಾದ ಕೆ.ಬಿ ಇಬ್ರಾಹಿಂ ವಹಿಸಿದ್ದರು. ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ನ್ಯಾಯಾಂಗ ಇಲಾಖೆಯ ಸಹಾಯಕ ಅಧಿಕಾರಿ ಸುಳ್ಯ ಕೇರ್ಪಳ ನಿವಾಸಿ ರಾಹಿಲ್ ರವರು ಉಪನ್ಯಾಸ ನೀಡಿ ವಿದ್ಯಾರ್ಥಿ ಜೀವನದಲ್ಲಿಯೇ ಸ್ವಚ್ಛತೆಯನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿ ಆರೋಗ್ಯ ಕಾಪಾಡಿಕೊಂಡು ಸ್ವಚ್ಛ ಪರಿಸರವನ್ನು ನಿರ್ಮಾಣಮಾಡಿ ಇತರರಿಗೆ ಮಾದರಿಯಾಗಿ ಬದುಕುವ ಪರಿಪಾಠವನ್ನು ಮೈಗೂಡಿಸಿ ಕೊಂಡರೆ ಅನ್ಸಾರ್ ನಂತಹ ಸಂಸ್ಥೆ ಕೈಗೊಂಡ ಸ್ವಚ್ಛತಾ ಅಭಿಯಾನ ಅರ್ಥಪೂರ್ಣ ವಾಗುತ್ತದೆ ಎಂದು ತಿಳಿಹೇಳಿದರು.


ಕಾರ್ಯಕ್ರಮದಲ್ಲಿ ಸ್ವಚ್ಛತಾ ಆಂದೋಲನದ ಸಂಚಾಲಕರಾದ ಹಾಜಿ ಯಾಕೂಬ್ ಎಸ್.ಟಿ, ಪದಾಧಿಕಾರಿಗಳಾದ ಬಶೀರ್ ಸಪ್ನಾ, ಸಂಶುದ್ಧೀನ್ ಕೆ.ಬಿ ನಿರ್ದೇಶಕರುಗಳಾದ ಸಿರಾಜ್ ಫ್ಯಾನ್ಸಿ,ಅಬ್ದುಲ್ ಮಜೀದ್ ಕೆ.ಪಿ ಹಯಾತುಲ್ ಇಸ್ಲಾಂ ಮದರಸ ಕಮಿಟಿ ಅದ್ಯಕ್ಷರಾದ ಅಬ್ದುಲ್ಲ ಎನ್.ಎ, ಪ್ರಧಾನ ಕಾರ್ಯದರ್ಶಿ ಫೈಸಲ್ ಎಸ್.ಎ, ಮದರಸ ಸಹ ಅದ್ಯಾಪಕರಾದ ಸಿರಾಜ್ ಸಅದಿ, ಮದರಸ ಉಸ್ತುವಾರಿ ಕಬೀರ್.ಕೆ, ಮಾಜಿ ಅದ್ಯಕ್ಷರಾದ ಹಾಜಿ ಅಬೂಬಕ್ಕರ್ ವಿ.ಕೆ, ಮಾಜಿ ಪ್ರಧಾನ ಕಾರ್ಯದರ್ಶಿ ಶಮೀರ್ ಪಿ.ಯಂ, ಸ್ಥಳೀಯರಾದ ಮುಸ್ತಪ.ಕೆ, ಇಸ್ಮಾಯಿಲ್ ಎಸ್.ಎಂ ಹಾಗೂ ಮತ್ತಿತರರು ಉಪಸ್ತಿತರಿದ್ದರು.
ಕಾರ್ಯಕ್ರಮಕ್ಕೆ ಸ್ಥಳೀಯ ಗ್ರೀನ್ ಬಾಯ್ಸ್ ತಂಡ ಸಹಕಾರನ್ನು ನೀಡುತ್ತಿದ್ದು ಅನ್ಸಾರ್ ನಿರ್ದೇಶಕರಾದ ಶರೀಫ್ ಜಟ್ಟಿಪ್ಪಳ್ಳ ಸರ್ವ ಸ್ವಾಗತಿಸಿ ಸಹ ಸಂಚಾಲಕರಾದ ಅಬ್ದುಲ್ ಮಜೀದ್ ಕೆ.ಬಿ ವಂದಿಸಿದರು.









