ನವಂಬರ್ 26ರಂದು ಸುಬ್ರಮಣ್ಯ ಬಿಳಿನೆಲೆ ಕೋಟೆಹೊಳೆ ಸೇತುವೆ ಬಳಿ ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕ ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ನಿವಾಸಿ ವಿಶ್ವಾಸ್ 31 ವರ್ಷ ಎಂದು ತಿಳಿದು ಬಂದಿದೆ. ಇವರು ಕಲ್ಕಂದೂರು ನಿವಾಸಿ ಕೃಷ್ಣಪ್ಪ ಎಂಬುವವರ ಪುತ್ರರಾಗಿದ್ದು ಸೋಮವಾರ ಪೇಟೆಯಿಂದ ಮಂಗಳೂರಿಗೆ ಖಾಸಗಿ ಕಂಪೆನಿ ಉದ್ಯೋಗ ನಿಮಿತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ವಿಶ್ವಾಸ್ ಚಲಾಯಿಸಿಕೊಂಡು ಹೋಗುತ್ತಿದ್ದ KA-01-HX-1968ನೇ ಸ್ಕೂಟರ್ ಗೆ ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ಬಂದ KA-12-MA-8653ನೆ ನೊಂದಣಿಯ ಕಾರನ್ನು ಅದರ ಚಾಲಕ ನಂದನ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಅಪಘಾತಪಡಿಸಿರುತ್ತಾನೆ. ಪರಿಣಾಮ ಸ್ಕೂಟರ್ ಸಮೇತ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗಳಾಗಿರುತ್ತದೆ.

ಸ್ಥಳದಲ್ಲಿದ್ದ ಪಿರ್ಯಾದಿದಾರರು ಹಾಗೂ ಮತ್ತೋರ್ವ ಉಪಚರಿಸಿ ಚಿಕಿತ್ಸೆಗೆ ಕಡಬ ಕಡೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ನೀಡಿರುವ ದೂರಿನ ಮೇರೆಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ: 146/2026, ಕಲಂ: 281, 106 BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *