ಕನ್ನಡ ಶಾಲೆ ಉಳಿಸಿ ಕನ್ನಡವನ್ನು ಬೆಳೆಸಿ ಕನ್ನಡದ ಭವಿಷ್ಯವನ್ನು ರಕ್ಷಿಸಿ ❤️
ಕನ್ನಡ ಶಾಲೆಗಳ ಉಳಿವು ಬೆಳವಣಿಗೆ ಹಾಗೂ ಕನ್ನಡ ಮಾಧ್ಯಮ ಶಿಕ್ಷಣದ ಬಲವರ್ಧನೆಗಾಗಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷರಾದ ಶ್ರೀ ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 16 ರಿಂದ ಐತಿಹಾಸಿಕ ಕರ್ನಾಟಕ ಯಾತ್ರೆ ಆರಂಭವಾಗಲಿದೆ.
ಕಾಸರಗೋಡು ಜಿಲ್ಲೆಯಿಂದ ಆರಂಭಗೊಳ್ಳುವ ಈ ಕರ್ನಾಟಕ ಯಾತ್ರೆ ಕರ್ನಾಟಕದಾದ್ಯಂತ 31 ಜಿಲ್ಲೆಗಳ 230 ತಾಲೂಕುಗಳಲ್ಲಿ ಸಂಚರಿಸಿ ಕನ್ನಡ ಶಾಲೆಗಳ ಸ್ಥಿತಿ ಕನ್ನಡ ಮಾಧ್ಯಮ ಶಿಕ್ಷಣದ ಅಗತ್ಯತೆ ಹಾಗೂ ಕನ್ನಡದ ಭವಿಷ್ಯದ ಕುರಿತು ಜನಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಕೈಗೊಳ್ಳಲಿದೆ. ಇದು ಕೇವಲ ಒಂದು ಯಾತ್ರೆಯಲ್ಲ ಇದು ಕನ್ನಡ ಶಾಲೆಗಳ ಉಳಿವಿಗಾಗಿ ನಡೆಯುವ ಜನಾಂದೋಲನ ಇದು ಕನ್ನಡ ಮಾಧ್ಯಮದ ರಕ್ಷಣೆಗಾಗಿ ನಡೆಯುವ ಜಾಗೃತಿ ಅಭಿಯಾನ ಇದು ಮುಂದಿನ ಪೀಳಿಗೆಗೆ ಕನ್ನಡದ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಉಳಿಸಿಕೊಡುವ ಸಂಕಲ್ಪ ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡದ ಬೇರುಗಳು ಮತ್ತಷ್ಟು ಗಟ್ಟಿಯಾಗುತ್ತವೆ.
ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಉತ್ತೇಜನ ದೊರೆತಾಗ ಮಾತ್ರ ನಮ್ಮ ಮಕ್ಕಳಿಗೆ ನಮ್ಮ ಭಾಷೆ ನೆಲ ನಾಡು ಮತ್ತು ಸಂಸ್ಕೃತಿಯೊಂದಿಗೆ ಗಟ್ಟಿಯಾದ ಬಾಂಧವ್ಯ ಬೆಳೆಸಲು ಸಾಧ್ಯ. ಈ ಮಹತ್ವದ ಉದ್ದೇಶವನ್ನು ಮನಗಂಡು ನಮ್ಮ“ಕರುನಾಡ ಸೇವಕರು” ಸಂಘಟನೆಯು ಕರ್ನಾಟಕ ಯಾತ್ರೆಗೆ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತಿದೆ ಕನ್ನಡಕ್ಕಾಗಿ ನಡೆಯುವ ಈ ಮಹತ್ವದ ಹೋರಾಟದಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸೋಣ ಕನ್ನಡ ಶಾಲೆಗಳಿಗೆ ಬೆಂಬಲ ನೀಡೋಣ ಕನ್ನಡ ಮಾಧ್ಯಮ ಶಿಕ್ಷಣವನ್ನು ಪ್ರೋತ್ಸಾಹಿಸೋಣ.
ನಮ್ಮ ಮಕ್ಕಳ ಭವಿಷ್ಯದಲ್ಲಿ ಕನ್ನಡಕ್ಕೆ ಗೌರವಯುತ ಸ್ಥಾನ ಕಲ್ಪಿಸೋಣ ಕನ್ನಡ ನಮ್ಮ ಹೆಮ್ಮೆ ಕನ್ನಡ ಶಾಲೆ ನಮ್ಮ ಹೊಣೆಗಾರಿಕೆ ಕನ್ನಡದ ಭವಿಷ್ಯ ನಮ್ಮೆಲ್ಲರ ಜವಾಬ್ದಾರಿ ಸೆಪ್ಟೆಂಬರ್ 16ರಿಂದ ನಡೆಯಲಿರುವ ಕರ್ನಾಟಕ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸುತ್ತಾ ಈ ಮಹತ್ವದ ಅಭಿಯಾನಕ್ಕೆ ಕರುನಾಡ ಸೇವಕರು ಸಂಘಟನೆಯ ಸಂಪೂರ್ಣ ಬೆಂಬಲ ಸದಾ ಇರಲಿದೆ.
ಕನ್ನಡ ಉಳಿಸಿ ಕನ್ನಡ ಶಾಲೆ ಉಳಿಸಿ
ಕನ್ನಡ ಬೆಳೆಸಿ ಕನ್ನಡ ನಾಡು ಬೆಳೆಸಿ
ಜೈ ಕನ್ನಡಾಂಬೆ
ಕನ್ನಡವೇ ಸತ್ಯ ಕನ್ನಡವೇ ನಿತ್ಯ

