ನವದೆಹಲಿ: ಗ್ರಾಮೀಣ ಪ್ರದೇಶದ LPG ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೌಲಭ್ಯ ಕಲ್ಪಿಸಿದೆ. ಗ್ಯಾಸ್ ಸಿಲಿಂಡರ್ ಮರುಬುಕ್ಕಿಂಗ್ಗೆ ಗ್ರಾಮೀಣ ಗ್ರಾಹಕರು ಕಾಯಬೇಕಿದ್ದ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಲಾಗಿದೆ.
ಇದರಿಂದ ಗ್ರಾಮೀಣ ಪ್ರದೇಶದ ಗ್ರಾಹಕರೂ ನಗರ ಪ್ರದೇಶದ ಗ್ರಾಹಕರಂತೆ ಸಿಲಿಂಡರ್ ವಿತರಣೆ ಬಳಿಕ 25 ದಿನಗಳ ನಂತರ ಮುಂದಿನ LPG ಸಿಲಿಂಡರ್ ಅನ್ನು ಬುಕ್ ಮಾಡಬಹುದಾಗಿದೆ. ಈ ಬದಲಾವಣೆಯಿಂದ ಗ್ಯಾಸ್ ಅಗತ್ಯ ಹೆಚ್ಚಿರುವ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ಹಿಂದೆ ಗ್ರಾಮೀಣ ಪ್ರದೇಶಗಳಿಗೆ 45 ದಿನಗಳ ಹಾಗೂ ನಗರ ಪ್ರದೇಶಗಳಿಗೆ 25 ದಿನಗಳ ಮರುಬುಕ್ಕಿಂಗ್ ಅಂತರ ನಿಗದಿಪಡಿಸಲಾಗಿತ್ತು. ಇದೀಗ ಗ್ರಾಮೀಣ ಗ್ರಾಹಕರಿಗೂ 25 ದಿನಗಳ ನಿಯಮ ಅನ್ವಯವಾಗಲಿದೆ.
ಗ್ರಾಮೀಣ ಭಾಗಗಳಲ್ಲಿ LPG ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವು ಗ್ರಾಹಕರಿಗೆ ಹೆಚ್ಚಿನ ಅನುಕೂಲ ನೀಡುವ ನಿರೀಕ್ಷೆಯಿದೆ.

