ಮೀಲಾದ್ ಜಾಥಾ ಕಾರ್ಯಕ್ರಮಕ್ಕೆ ಸಿಹಿ ತಿಂಡಿ -ಪಾನೀಯ ವಿತರಿಸಿ ಸೌಹಾರ್ದತೆ ಮೆರೆದ ಕಾಗಡಿಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಕ್ತಾದಿಗಳು


ಸೋಮವಾರಪೇಟೆ ಕಾಗಡಿಕಟ್ಟೆ ಬದ್ರಿಯಾ ಜುಮಾ ಮಸೀದಿ ಉದ್ಘಾಟನಾ ಸಮಾರಂಭದ ಮೀಲಾದ್ ಜಾಥಾದಲ್ಲಿ ನವಂಬರ್ 8 ರಂದು ಸ್ಥಳೀಯ ಪರಿಸರದ ಶ್ರೀ ಅಯ್ಯಪ್ಪ ದೇವಸ್ಥಾನದ ಭಕ್ತಾದಿಗಳು ಸಿಹಿ ತಿಂಡಿ ಹಾಗೂ ಪಾನೀಯ ವಿತರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.


ಜಾಥಾದಲ್ಲಿ ನೂರಾರು ಮುಸ್ಲಿಂ ಬಾಂಧವರು ಹಾಗೂ ವಿದ್ಯಾರ್ಥಿಗಳ ದಫ್ ಪ್ರದರ್ಶನದ ರ್ಯಾಲಿ ಸಾಗಿ ಬಂದ ಸಂಧರ್ಭ ಶ್ರೀ ಅಯ್ಯಪ್ಪ ಮಂದಿರದ ಮುಂಭಾಗದಲ್ಲಿ ಶಾಮಿಯಾನ ಅಳವಡಿಸಿ ಜಾಥಾಕ್ಕೆ ಸ್ವಾಗತಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯದ ಬೆಳಕನ್ನು ಚೆಲ್ಲಿದ್ದಾರೆ. ಈ ಒಂದು ಸಹಬಾಳ್ವೆ ಸಮಾಜಕ್ಕೆ ನೀಡಿರುವ ಉತ್ತಮ ಸಂದೇಶವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.










