ರಾಜ್ಯ ಸರ್ಕಾರದಿಂದ ನೇಮಕಾತಿ ಪಟ್ಟಿ ಬಿಡುಗಡೆ – ವಿವಿಧ ನಿಗಮ ಹಾಗೂ ಅಭಿವೃದ್ಧಿ ಮಂಡಳಿಗಳಿಗೆ ಕೊಡಗಿನ ಐವರಿಗೆ ಅವಕಾಶ
ಕೊಡಗು: ಕರ್ನಾಟಕ ರಾಜ್ಯ ಸರ್ಕಾರ ವಿವಿಧ ನಿಗಮ ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಕೊಡಗು ಜಿಲ್ಲೆಯಿಂದ ಐವರಿಗೆ ಸ್ಥಾನ ಲಭಿಸಿದೆ.


ಸಂಪಾಜೆಯ ಹೆಚ್.ಟಿ. ಶಿವಪ್ರಸಾದ್ (ಸೂರಜ್ ಹೊಸೂರು) ಅವರನ್ನು ಕಾವೇರಿ ಜಲಾನಯನ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.


ಗೋಣಿಕೊಪ್ಪಲು ಸಮೀಪದ ಅರ್ವತೋಕ್ಲು ಗ್ರಾಮದ ನಿವಾಸಿ ಎ.ಜೆ. ಬಾಬು ಅವರನ್ನು ಚೆಸ್ಕಾಂ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.


ನಾಪೋಕ್ಲುವಿನ ಕೆ.ಎ. ಇಸ್ಮಾಯಿಲ್ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.


ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯ ನಿವಾಸಿ ಕೆ.ಎಂ. ಲೋಕೇಶ್ ಅವರನ್ನು ಮಲೆನಾಡು ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.


ಇದೇ ವೇಳೆ ಕಿಗ್ಗಾಲು ಗ್ರಾಮದ ಐ.ಎಲ್. ಚಿಣ್ಣಪ್ಪ ಅವರನ್ನು ಶ್ರೀ ಕಂಠೀರವ ಸ್ಟುಡಿಯೋಸ್ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಈ ನೇಮಕಾತಿಯಲ್ಲಿ ಕೊಡಗು ಜಿಲ್ಲೆಯವರಿಗೆ ಅವಕಾಶ ದೊರೆತಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
