ಮೊಗರ್ಪಣೆ, ಹಳೆಗೇಟು, ಜಯನಗರ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಅನಾರೋಗ್ಯ ಪೀಡಿತ ಚಂದ್ರಶೇಖರ್ ಜಯನಗರ ರವರ ಮನೆಯ ವಠಾರದ ಕಾಡು ಪೊದೆಗಳ ತೆರವು ಕಾರ್ಯ

ಸುಳ್ಯ ಅನ್ಸಾರುಲ್ ಮುಸ್ಲೀಮೀನ್ ಅಸೋಸಿಯೇಶನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿರುವ ಸ್ವಚ್ಛತಾ ಆಂದೋಲನದ ಮಾಸಾಚರಣೆಯ 4 ನೇ ವಾರದ ಕಾರ್ಯಕ್ರಮ ನವಂಬರ್ 22 ರಂದು ಮೊಗರ್ಪಣೆ, ಹಳೆಗೇಟು ಜಯನಗರ ಪರಿಸರದಲ್ಲಿ ಯಶಸ್ವಿಯಾಗಿ ನಡೆಯಿತು.
ಮೊಗರ್ಪಣೆ ಮಸೀದಿ, ಹಳೆಗೇಟು ವಸಂತ ಕಟ್ಟೆ ಮುಂಬಾಗ ಹಾಗೂ ಜಯನಗರ ಪರಿಸರದ ಮದ್ರಸಾ ವಠಾರ, ಅಂಗನವಾಡಿ ಕೇಂದ್ರ, ಮುಂತಾದ ಕಡೆಗಳಲ್ಲಿ ಭಾವೈಕ್ಯತೆಯ ಸಂದೇಶವನ್ನು ನೀಡುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದರು.

ಚಂದ್ರಶೇಖರ್ ಜಯನಗರ ರವರ ಮನೆ ಪರಿಸರ ಸ್ವಚ್ಛತೆ
ತಾತ್ಕಾಲಿಕ ತುಳಸಿ ಕಟ್ಟೆ ನಿರ್ಮಿಸಿ ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಪರಿಸರ ದೂರವಿದ್ದರೂ ಪರಸ್ಪರ ಮನಸ್ಸು ಹತ್ತಿರವಿದೆ ಎಂಬ ಸಂದೇಶದೊಂದಿಗೆ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿಯೇ ಇರುವ ಜಯನಗರ ನಿವಾಸಿ ಚಂದ್ರಶೇಖರ್ ರವರ ಮನೆಗೆ ಭೇಟಿ ನೀಡಿದ ಸ್ವಚ್ಛತಾ ಅಭಿಯಾನದ ತಂಡ ಚಂದ್ರಶೇಖರ್ ರವರ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕೂಡಿದ್ದ ಕಾಡು ಪೊದೆಗಳನ್ನು ತೆರವುಗೊಳಿಸಿ ಸಹಕರಿಸಿದರು. ಅಲ್ಲದೆ ಸ್ವಚ್ಛತೆಯಲ್ಲಿ ಸೇರಿದ ಮುಸ್ಲಿಂ ಬಾಂಧವರು ಮನೆಯ ಮುಂಭಾಗದಲ್ಲಿದ್ದ ತುಳಸಿ ಗಿಡಕ್ಕೆ ತಾತ್ಕಾಲಿಕ ಕಟ್ಟೆಯನ್ನು ನಿರ್ಮಿಸಿ ಸೌಹಾರ್ದತೆಯನ್ನು ಮೆರೆದರು.

ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಹನೀಫ್ ಸಂಗಮ್ ರವರ ನೇತೃತ್ವದ ಯುವಕರ ತಂಡವು ಸಂಪೂರ್ಣ ಸಹಭಾಗಿತ್ವವನ್ನು ನೀಡಿ ಸ್ವಚ್ಛತೆಯಲ್ಲಿ ಭಾಗವಹಿಸಿ, ಸರ್ವರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿಕೊಟ್ಟರು.
ಕಾರ್ಯಕ್ರಮಕ್ಕೆ ಸ್ಥಳೀಯ ಮಹಿಳೆಯರು ತಮ್ಮ ತಮ್ಮ ಮನೆಯಿಂದ ವಿಶೇಷ ತಿಂಡಿ ಪದಾರ್ಥಗಳನ್ನು ತಯಾರಿಸಿ ನೀಡುವ ಮೂಲಕ ತಮ್ಮ ಸಹಕಾರವನ್ನು ಮೆರೆದರು.

ಸ್ಥಳೀಯ ಮಸೀದಿಯ ಮುದರ್ರಿಸರಾದ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲಿ ರವರು ಸಯ್ಯಿದ್ ಮಾಂಬ್ಳಿ ದರ್ಗಾದಲ್ಲಿ ದುಃವ ನೆರವೇರಿಸಿ ಇಸ್ಲಾಮಿನಲ್ಲಿ ಸ್ವಚ್ಛತೆಗೆ ಇರುವ ಆದ್ಯತೆಯ ಬಗ್ಗೆ ಮಾಹಿತಿ ನೀಡಿದರು.

ಅನ್ಸಾರ್ ಸಂಸ್ಥೆಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಸುಳ್ಯದ ಸ್ವಚ್ಛತಾ ರೂವಾರಿ ಹಾಗೂ ಸುಳ್ಯ ಲಯನ್ಸ್ ಅಧ್ಯಕ್ಷರಾದ ವಿನೋದ್ ಲಸ್ರಾದೋ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊಘರ್ಪಣೆ ಜುಮಾ ಮಸೀದಿಯ ಆಡಳಿತ ಕಮಿಟಿ ಅಧ್ಯಕ್ಷರಾದ ಸಿ ಎಂ ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ,ಸೂಡ ಅಧ್ಯಕ್ಷರಾದ ಕೆ ಎಂ ಮುಸ್ತಫ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್, ಆಂದೋಲನದ ಸಂಚಾಲಕ ಯಾಕೂಬ್ ಎಸ್. ಟಿ, ಕಾರ್ಯಕ್ರಮ ಸಂಯೋಜಕ ಕೆ. ಬಿ. ಅಬ್ದುಲ್ ಮಜೀದ್, ಗಾಂಧಿನಗರ ಎಂ ಜೆ ಎಂ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್, ಪದಾಧಿಕಾರಿಗಳಾದ ಹಮೀದ್ ಬೀಜಕೊಚ್ಚಿ, ಮುಹಿಯದ್ದೀನ್ ಫ್ಯಾನ್ಸಿ, ವರ್ತಕರ ಸಂಘದ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಹಮೀದ್ ಜನತಾ, ಅನ್ಸಾರ್ ಪದಾಧಿಕಾರಿಗಳಾದ ಹನೀಫ್ ಬುಶ್ರಾ, ಬಿ. ಎಂ ಹನೀಫ್ ಜನತಾ, ಸಂಶುದ್ದೀನ್ ಕೆ. ಬಿ. ಬಶೀರ್ ಸಪ್ನ, ಎನ್. ಎ. ಜುನೈದ್, ಎಂ. ಕೆ ಅಬ್ದುಲ್ ಲತೀಫ್, ಶುಕೂರ್ ಕೆ ಎಚ್, ಶಹೀದ್ ಪಾರೆ, ನೌಶಾದ್ ಬಾರ್ಪಣೆ, ಮಜೀದ್ ಕೆ.ಪಿ, ಸಿರಾಜ್ ಫ್ಯಾನ್ಸಿ, ಅನ್ಸಾರಿಯಾ ಪದಾಧಿಕಾರಿಗಳಾದ ಎಸ್. ಪಿ ಅಬೂಬಕ್ಕರ್, ಶಾಫಿ ಕುತ್ತಾಮೊಟ್ಟೆ, ಆದo ಹಾಜಿ ಕಮ್ಮಾಡಿ, ಅಝೀಝ್ ಸಂಗಂ, ಇಕ್ಬಾಲ್ ಬೋರುಗುಡ್ಡೆ, ಅಝೀಝ್ ಬೋರುಗುಡ್ಡೆ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿದಿಗಳಾದ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ, ಹಾಜಿ ಎಸ್. ಎ. ಹಮೀದ್ ಹಾಜಿ, ಸಿದ್ದೀಕ್ ಗೂನಡ್ಕ, ಹನೀಫ್ ಕೆವಿಜಿ ಮೊಗರ್ಪಣೆ, ಅಬ್ಬಾಸ್ ಬಾಯಿಕ್ಕೆರೆ, ಅಬೂಬಕ್ಕರ್ ಮೇಸ್ತ್ರಿ ಜಟ್ಟಿಪ್ಪಳ್ಳ, ಎಸ್ ವೈ ಅಬ್ದುಲ್ ರಹೀo ಮೊಗರ್ಪಣೆ, ಶಾಲಿ ಕಟ್ಟಕ್ಕಾರ್, ಹನೀಫ್ ಕುರುಂಜಿ, ನಾವಾಜ್ ಪಂಡಿತ್, ಮುನೀರ್ ಲ್ಯಾಂಡ್ ಲಿಂಕ್ಸ್, ಜಬ್ಬಾರ್ ಲ್ಯಾಂಡ್ ಲಿಂಕ್ಸ್, ಬಶೀರ್ ಕೆ ಎಂ, ಶರೀಫ್ ಸೀಝ, ಸಾದಿಕ್, ಸಮೀರ್ ಮೊಗರ್ಪಣೆ, ಜಿ ಕೆ ಅಬ್ದುಲ್ ರಝಕ್, ಅಂದು ಶಾಂತಿನಗರ, ನಜೀರ್ ಶಾಂತಿನಗರ, ಬದ್ರು ಡಿ ಎಚ್, ಖಯ್ಯು ಕಟ್ಟೆಕ್ಕಾರ್ಸ್, ಅಂದಚ್ಚ ಅಡ್ಕತ್ ಬೈಲ್, ಆದ್ದು ಬೋರುಗುಡ್ಡೆ ಮೊದಲಾದ ಪ್ರಮುಖರು ಭಾಗವಹಿಸಿದ್ದರು.
ಸೂಡ ಅಧ್ಯಕ್ಷರಾದ ಕೆಎಂ ಮುಸ್ತಫ ಸ್ವಾಗತಿಸಿ, ಸ್ವಚ್ಛತಾ ಆಂದೋಲನದ ಮೊಗರ್ಪಣೆ ಸಂಚಾಲಕರಾದ ಹಸೈನಾರ್ ಜಯನಗರ ವಂದಿಸಿದರು. ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸಹಕರಿಸಿದರು.







