ಗ್ರಾಮ ಪಂಚಾಯತ್ ವತಿಯಿಂದ ನಡೆದ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ
2026 ನೇ ಸಾಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಪ್ರಯುಕ್ತ ಸುಬ್ರಹ್ಮಣ್ಯ ಗ್ರಾ.ಪಂನಲ್ಲಿ ನ.21 ರಂದು
ಪೂರ್ವಭಾವಿ ಸಭೆ ನಡೆಯಿತು.

ಗ್ರಾ.ಪಂ ಆಡಳಿತಾಧಿಕಾರಿ ಶ್ರೀಕಾಂತ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಪಿಡಿಒ ಮಹೇಶ್, ಗ್ರೇಡ್ ವನ್ ಕಾರ್ಯದರ್ಶಿ ಮೋನಪ್ಪ ಡಿ, ಕೆಡಿಪಿ ಸದಸ್ಯ ಶಿವರಾಮ ರೈ ಗ್ರಾ.ಪಂ ನ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯ, ಪ್ರವೀಣ ರೈ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಕ್ರೈಂ ಎಸ್ ಐ ರಾಮಚಂದ್ರ , ಮೆಸ್ಕಾಂನ ಚಿದಾನಂದ ಕೆ ಮತ್ತಿತರರು ಭಾಗವಹಿಸಿದ್ದರು.

ಸಭೆಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆದು ಪಾರ್ಕಿಂಗ್ ಏರಿಯಾದಲ್ಲಿ ಹೆಚ್ಚಿನ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ 24 ಗಂಟೆಯೂ ಇರುವಂತೆ ನಿರ್ಣಯ ಕೈಗೊಳ್ಳಲಾಯಿತು.
ಷಷ್ಠಿ ಮಹೋತ್ಸವ ಸಂದರ್ಭ ಅಳವಡಿಸಿರುವ ಲೈಟಿಂಗ್ಸ್, ಬೀದಿ ದೀಪ, ಜಾತ್ರಾವಧಿ ಪೂರ್ಣಗೊಳ್ಳುವವರೆಗೆ ಇರುವಂತೆ, ಜಾತ್ರಾ ಸಮಯದಲ್ಲಿ ಕುಮಾರಧಾರ ದಿಂದ ಕಾಶಿಕಟ್ಟೆ ವರೆಗೆ ಬಸ್ ವ್ಯವಸ್ಥೆ ವರ್ಷ ಪ್ರತಿಯಂತೆ ಬೇಕಾಗಿದ್ದು ಅದರಲ್ಲಿ ದೇವಳದ ಎರಡು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಬೇಕು, ಉರುಳು ಸೇವೆ ಕೈಗೊಳ್ಳುವ ಭಕ್ತಾದಿಗಳಿಗೆ ಕುಮಾರಧಾರದಲ್ಲಿ ಸರಿಯಾದ ಮಾಹಿತಿ ನೀಡಿ ಬಿಸಿಲಿನ ಸಮಯದಲ್ಲಿ ಸೇವೆ ಕೈಗೊಳ್ಳದಂತೆ, ಬೆಂಗಾವಲಿಗೆ ಒಟ್ಟಿಗೆ ಜನರಿರುವಂತೆ ಮಾಹಿತಿ ನೀಡುವುದು,ಸ್ವಚ್ಚತಾ ಜಾಗೃತಿ ಬಗ್ಗೆ ಆಗಾಗ ಧ್ವನಿವರ್ಧಕ ಮೂಲಕ ಬಿತ್ತರಿಸುವುದು,ಕುಲ್ಕುಂದ, ಪರ್ವತಮುಖಿ, ಇಂಜಾಡಿ, ಭಾಗಗಳಲ್ಲಿ ದೇವಾಲಯದ ವತಿಯಿಂದ ಕಸದ ತೊಟ್ಟಿ ನಿರ್ಮಿಸುವುದು ಗ್ತಾ.ಪಂ ವತಿಯಿಂದ ನಿರ್ವಹಿಸುವುದು. ಆರೋಗ್ಯ ಇಲಾಖೆ, ಗ್ತಾ.ಪಂ, ಪೊಲೀಸ್, ಅರಣ್ಯ, ದೇವಾಲಯ ಜಂಟಿಯಾಗಿ ಸ್ವಚ್ಛತೆಗಾಗಿ ದಂಡ ಹಾಕುವ ನಿಯಮ ಜಾರಿಗೊಳಿಸಿ ಸ್ವಚ್ಚತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವುದು.
ಎಲ್ಲಾ ವಸತಿ ಗೃಹ ಗಳ ರೂಂ ಗಳ ದರ ಪಟ್ಟಿ ಅಧಿಕೃತವಾಗಿ ಪ್ರದರ್ಶಿಸುವುದು. ಪಾಲಿಸದಿದ್ದರೆ ಗ್ತಾ.ಪಂ ಸೂಕ್ತ ಕ್ರಮ ಕೈಗೊಳ್ಳುವ,ಆಹಾರ ಸಂರಕ್ಷಣಾ ವಿಚಾರವಾಗಿ ಇಲಾಖಾಧಿಕಾರಿಗಳು ತಪಾಸಣೆ ನಡೆಸುವುದು ನಿರ್ಣಯ ಕೈಗೊಳ್ಳಲಾಯಿತು.






