ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮದ ನಿಮಿತ್ತ ಕುಶಾಲನಗರಕ್ಕೆ ಆಗಮಿಸಿದ್ದು ಈ ಸಂದರ್ಭ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರುಗಳು ಭವ್ಯ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ಮಾಜಿ ಶಾಸಕರುಗಳಾದ ಕೆ. ಮಹದೇವ್, ಹರಪಳ್ಳಿ ರವೀಂದ್ರ, ಅಪ್ಪಚ್ಚು ರಂಜನ್ ಹಾಗೂ ಕುಶಾಲನಗರ ನಗರಾಧ್ಯಕ್ಷ ಚಂದ್ರು, ಮಿನಿಸ್ಟರ್ ಕೋರ್ಟ್ ರಘು, ವೆಂಕಟೇಶ್, ಜಕ್ರಿಯಾ ಮಾದಾಪುರ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದಂತೆ ಕಾರ್ಯಕರ್ತರುಗಳು ಜಯ ಘೋಷ ಕೂಗಿದರು. ಅಲ್ಪಸಮಯ ಕಾರ್ಯಕರ್ತರೊಂದಿಗೆ ಕಳೆದ ಸಚಿವರು ಪಕ್ಷದ ಕಾರ್ಯ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿದರು.







