ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ರವರಿಂದ ಪುಸ್ತಕ ಬಿಡುಗಡೆ
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಆಶ್ರಯದಲ್ಲಿ ಸುಳ್ಯ ತಾಲೂಕಿನ 9 ಸಾಹಿತಿಗಳ ಮತ್ತು 3 ಸಾಧಕರ ಪರಿಚಯ ಮಾಲಿಕೆ ಬಿಡುಗಡೆ ಕಾರ್ಯಕ್ರಮ ಸುಳ್ಯದ ಕನ್ನಡ ಭವನದಲ್ಲಿ ನ.23ರಂದು ನಡೆಯಿತು. ಕ.ಸಾ.ಪ. ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ರವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ‘ಸುಳ್ಯ ಕಸಾಪ ಕಳೆದ ಐದು ವರ್ಷಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಚಂದ್ರಶೇಖರ ಪೇರಾಲು ರವರ ತಂಡದ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಬರೆದ ವೈದ್ಯಕೀಯ ಕ್ಷೇತ್ರ ಮೇರು ಸಾಧಕ : ಡಾ. ಕೆ.ವಿ. ಚಿದಾನಂದ ತೇಜಸ್ವಿ ಕಡಪಳ ಬರೆದ ತೂಗು ಸೇತುವೆಗಳ ಸರದಾರ : ಗಿರೀಶ್ ಭಾರದ್ವಾಜ್ ನಿವೃತ್ತ ಶಿಕ್ಷಕಿ ಶ್ರೀಮತಿ ಚಂದ್ರಮತಿ ಅವರು ಬರೆದ ಸಾಹಿತ್ಯದ ಸಾರಥಿ : ಶ್ರೀಮತಿ ಮೀನಾಕ್ಷಿ ಗೌಡ ಎಂ., ಶ್ರೀಮತಿ ನಂದಕುಮಾರ ಸ್ವಾಮಿ ಬರೆದ ಪ್ರಗತಿಶೀಲ ಬರಹಗಾರ ನಿರಂಜನ ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಬರೆದ ಸಾಹಿತ್ಯ ಲೋಕದ ಸವ್ಯಸಾಚಿ ಟಿ.ಜಿ.ಮುಡೂರು ಕುಮಾರ ಸ್ವಾಮಿ ತೆಕ್ಕುಂಜ ಬರೆದ ಸುಮನಸ್ಸಿನ ಪರಿಸರ ಕವಿ ಜಿ.ಎಸ್. ಉಬರಡ್ಕ ಲೇಖಕಿ ಚಂದ್ರಾವತಿ ಬಡ್ಡಡ್ಕ ಬರೆದ ಚೊಕ್ಕಾಡಿಯ ಸಿರಿ ಪಾರಿಜಾತ ಸುಬ್ರಾಯ ಚೊಕ್ಕಾಡಿ ರಾಮಚಂದ್ರ ಪಲ್ಲತ್ತಡ್ಕ ಬರೆದ ಪರಿಸರ ಕವಿ ಕುತ್ಯಾಳ ನಾಗಪ್ಪ ಗೌಡ ಸ್ಮಿತಾ ಅಮೃತ್ ರಾಜ್ ಬರೆದ ಬಹುಮುಖ ಪ್ರತಿಭೆಯ ವಿಶಿಷ್ಟ ಚಿಂತಕ ಡಾ. ಪ್ರಭಾಕರ ಶಿಶಿಲ ಲೀಲಾ ದಾಮೋದರ್ ಬರೆದ ಜೀವನ್ಮುಖಿ ಅಮ್ಮ ಎಂ.ಜಿ. ಕಾವೇರಮ್ಮ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ಅಧ್ಯಕ್ಷರಾದ ಯಶ್ವಿತ್ ಕಾಳಮ್ಮನೆ ಬರೆದ ಹಳಬರ ಜೋಳಿಗೆಯ ಜಯಮ್ಮ ಚೆಟ್ಟಿಮಾಡ, ಸಂಜೀವ ಕುದ್ಪಾಜೆ ಬರೆದ ಅಂತರಾಷ್ಟ್ರೀಯ ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪಗೌಡ ಎಂಬ ಪುಸ್ತಕ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ.ಪ್ರಭಾಕರ ಶಿಶಿಲ, ಕುತ್ಯಾಳ ನಾಗಪ್ಪ ಗೌಡ(ಕಿರಣ), ಜಯಮ್ಮ ಚೆಟ್ಟಿಮಾಡ, ಕಸಾಪ ಪೂರ್ವಾಧ್ಯಕ್ಷರುಗಳಾದ ಎಂ.ಮೀನಾಕ್ಷಿ ಗೌಡ, ಡಾ.ಹರಪ್ರಸಾದ್ ತುದಿಯಡ್ಕ, ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ, ಕೋಶಾಧಿಕಾರಿ ದಯಾನಂದ ಆಳ್ವ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಸೇರಿದಂತೆ ವಿವಿಧ ಗಣ್ಯರುಗಳು ಉಪಸ್ಥಿತರಿದ್ದರು.

ತೇಜಸ್ವಿ ಕಡಪಳ ಸ್ವಾಗತಿಸಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ ವಂದಿಸಿದರು, ಚಂದ್ರಮತಿ.ಕೆ, ಕಾರ್ಯಕ್ರಮ ನಿರೂಪಿಸಿದರು.









