ಮಂದಿರ, ಮಸೀದಿ, ಚರ್ಚ್ ಸಮಿತಿಗಳು, ಶಿಕ್ಷಣ ಸಂಸ್ಥೆಗಳು, ಪಂಚಾಯತ್ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗಿ

ಭಾರತದ ಸಂವಿಧಾನ ದಿನಾಚರಣೆಯ ಅಂಗವಾಗಿ ನವಂಬರ್ 26ರಂದು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಂದಿರ ಮಸೀದಿ ಚರ್ಚ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ, ಹಾಗೂ ಸಂಘ ಸಂಸ್ಥೆಗಳ, ಪದಾಧಿಕಾರಿಗಳು ಒಟ್ಟಾಗಿ ಭಾಗವಹಿಸಿ ಸ್ವಚ್ಛತೆಯ ಸಂದೇಶವನ್ನು ಸಾರಿದರು. ಪೆಲ್ತಡ್ಕದಿಂದ ಸಂಪಾಜೆ ತನಕ ಬೃಹತ್ ಸ್ವಚ್ಛತಾ ಕಾರ್ಯ ನಡೆದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ರವರು ನೇತೃತ್ವ ವಹಿಸಿದ್ದರು.

ಅಭಿಯಾನದಲ್ಲಿ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ನಹೀಂ ಫೈಝಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಜಿ ಕೆ ಹಮೀದ್ ಗೂನಡ್ಕ. ಶ್ರೀಮತಿ ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ಮಾಜಿ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಮಾಜಿ ಸದಸ್ಯರಾದ ನಾಗೇಶ್ ಪಿ. ಆರ್., ವಿಮಲ ಪ್ರಸಾದ್, ಅನುಪಮ. ಪೇರಡ್ಕ ಮುಹಿಯುದ್ದೀನ್ ಜುಮಾಮಸೀದಿ ಅಧ್ಯಕ್ಷರಾದ ಪಿ. ಕೆ.ಉಮ್ಮರ್, ಅಂಗನವಾಡಿ ಕಾರ್ಯಕರ್ತರಾದ ಧರ್ಮಕಲಾ, ಪುಷ್ಪವತಿ ರಾಜರಾಂಪುರ, ಪುಷ್ಪ, ಆಶಾ, ವಿನಯಕುಮಾರ್, ಹರ್ಷಿತಾ, ಕಲ್ಲುಗುಂಡಿ ಸೊಸೈಟಿಯ ವ್ಯವಸ್ಥಾಪಕರಾದ ವೀರೇಂದ್ರ ಜೈನ್, ಕೃಷ್ಣವೇಣಿ, ಮಮ್ತಾಜ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್, ಆಂಬುಲೆನ್ಸ್ ಚಾಲಕ ಸಂಘಟನೆಯ ತಾಜ್ ಟರ್ಲಿ. ಶರತ್ ಕಿಲಾರ್ ಕಲ್ಲುಗುಂಡಿ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಎಂ ಸಿ ಅಬೂಬಕ್ಕರ್, ಆಟೋ ಚಾಲಕರ ಸಂಘದ ಯಶೋಧರ, ಸುಧಾಕರ್, ಒಡಿಯೂರು ಸಂಘದ ರತ್ನಾವತಿ, ಕೃಷಿ ಸಕಿ ರತ್ನಾವತಿ, ಮುರಾರಿ ಪೆಲ್ತಡ್ಕ. ಎಸ್. ಕೆ. ಎಸ್ ಎಸ್ ಎಫ್ ಸಂಘಟನೆಯ ಸಾಜಿದ್ ಅಜ್ಹರಿ, ಅಬ್ದುಲ್ ಖಾದರ್ ಮೊಟ್ಟಂಗಾರ್, ಮುಸ್ತಫ ಪಾಂಡಿ.

ಸಧುಮೋನ್ ಪೇರಡ್ಕ ಜುಮಾ ಮಸೀದಿ ಕಾರ್ಯದರ್ಶಿ ಉಸ್ಮಾನ್ ಗೂನಡ್ಕ, ಸಂಜೀವಿನೀ ಒಕ್ಕೂಟದ ಕಾಂತಿ, ಭಾರತಿ, ಯಶೋಧ, ಶಾರದಾ ಶಾಲೆಯ ಹನುಮಂತ ಮಾಸ್ಟರ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಚಂದ್ರ ಕಲ್ಲಗದ್ದೆ, ಸರಕಾರಿ ಶಾಲೆಯ ಅಧ್ಯಾಪಕರುಗಳು, ಕ್ರೈಸ್ತ ಸಂಘಟನೆಯ ಸಂತೋಷ್ ಕ್ರಾಸ್ತಾ, ಸಂಪಾಜೆ ಹೋಲಿ ಟ್ರಿನಿಟಿ ಚರ್ಚ್ ಸಮಿತಿಯ ಲುಕಾಸ್ ಕುರಿಯಕೋಸ್, ಜೋನಿ, ಪ್ರಕಾಶ್, ಜೋಯಿ ಜೋಸೆಪ್, ಪೊಪ್ಪಿ,ಹಾಗೂ ಗೂನಡ್ಕ ಟೀ ಸ್ಟೋರಿ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.

















