ಮಂಗಳೂರು: ಮಂಗಳೂರಿನ ನಗರಾಭಿವೃದ್ಧಿಗೆ ಹೊಸ ಆಯಾಮ ನೀಡುವ ಉದ್ದೇಶದಿಂದ 200 ಮೀಟರ್ ಎತ್ತರದ ‘ಮಂಗಳೂರು ಐ’ ವಾಣಿಜ್ಯ ಸಂಕೀರ್ಣದ ಯೋಜನೆ ಗಮನ ಸೆಳೆದಿದೆ.
ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡಲು ವಿವಿಐಪಿ ಮಾದರಿಯಲ್ಲಿ ವಿ ಜಿ ಫ್ ನೆರವಿನೊಂದಿಗೆ ಸುಮಾರು 200 ಮೀಟರ್ ಎತ್ತರದ ‘ಮಂಗಳೂರು ಐ ‘ ವಾಣಿಜ್ಯ ಸಂಕೀರ್ಣ. ಮೂರು ಸಮುದಾಯ ಭವನಗಳು , ರಿವಾಲ್ವಿಂಗ್ ರೆಸ್ಟೋರೆಂಟ್ ಹಾಗೂ 360 view ನೋಟದ ಎರಡು ಅಂತಸ್ತಿನ ವೀಕ್ಷಣಾ ಗ್ಯಾಲರಿ ಇರಲಿದೆ

ಆಧುನಿಕ ವಾಸ್ತುಶಿಲ್ಪದ ವಿನ್ಯಾಸದಲ್ಲಿ ರೂಪಿಸಲಾದ ಈ ಸಂಕೀರ್ಣವು ವಾಣಿಜ್ಯ ಚಟುವಟಿಕೆಗಳಿಗೆ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪರಿಕಲ್ಪನೆಯನ್ನು ಹೊಂದಿದೆ. ಮಂಗಳೂರಿನ ಆಕಾಶರೇಖೆಗೆ ಹೊಸ ಮೆರುಗು ನೀಡುವ ಈ ಯೋಜನೆಯ ಚಿತ್ರವನ್ನು ಸಚಿವ ಯುಟಿ ಖಾದರ್ ಇನ್ಸ್ಟಾಗ್ರಾಮ್ ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹಂಚಿಕೊಳ್ಳಲಾಗಿದೆ.
