ಕನ್ನಡ ಕಾಸರಗೋಡು:  ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಕರ್ನಾಟಕ -ಕಾಸರಗೋಡು ಕನ್ನಡ ಯಾತ್ರೆ ಅಭಿಯಾನ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ನೇತೃತ್ವದಲ್ಲಿ ಕಾಸರಗೋಡು ಪ್ರದೇಶದಲ್ಲಿ ಕಳೆದ ಏಳು ದಿನಗಳಿಂದ ಶಾಲೆಗಳಲ್ಲಿ, ವಿವಿಧ ಕನ್ನಡ ಮುಖಂಡರ ಭೇಟಿ ಚರ್ಚೆಯೊಂದಿಗೆ ನಡೆಯುತ್ತಿದೆ.

ಸಕಾರಾತ್ಮಕ ಈ ಕಾರ್ಯಕ್ರಮ ದಲ್ಲಿ “ಕನ್ನಡದ ನಡಿಗೆ -ಶಾಲೆಯ ಕಡೆಗೆ “ಕಾರ್ಯಕ್ರಮ ದ ರೂವಾರಿ, ಕನ್ನಡ ಭವನ, ಕನ್ನಡ ಚು. ಸಾ. ಪ. ಕೇಂದ್ರ ಸಮಿತಿ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಸಂಪೂರ್ಣ ಸಹಕಾರದಲ್ಲಿ ನಡೆಯುತ್ತಿದೆ.

ಉನೖಸ್ ಪೆರಾಜೆ ಯವರ ಕನ್ನಡ ಶಾಲೆ ಉಳಿಸುವ, ಕಾಳಜಿಗೆ ಜೈ ಎಂದಿದ್ದಾರೆ, ಸಂಪೂರ್ಣ ಸಹಕಾರ ಘೋಷಿಸಿ ಕೈ ಜೋಡಿಸಿದ್ದಾರೆ.

ಉನೈಸ್ ಪೆರಾಜೆ ಯವರ ಕನ್ನಡ ಶಾಲೆ ಉಳಿಸಿ ಅಭಿಯಾನದ ಒಂಬತ್ತನೇ ದಿನ ಗುರುವಾರ 24.ರ ಸಂಜೆ 4.30 ಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ಅಭಿಯಾನದ ಕಾಸರಗೋಡು ಸಮಾವೇಶ ನಡೆಯಲಿದೆ.

ಕನ್ನಡ ಶಾಲೆಗಳು ಉಳಿಯಬೇಕು -ಕನ್ನಡ ಕಾಸರಗೋಡಿನಲ್ಲಿ ಚಿರಕಾಲ ಬಾಳಬೇಕು ಎಂಬ ಚಿಂತನವಿರುವ ಕನ್ನಡ ಸುಮನಸ್ಸುಗಳು ಗುರುವಾರ ಸಂಜೆ 4.30.ಗೆ ಕಾಸರಗೋಡು ಕನ್ನಡ ಭವನ ವೇದಿಕೆಯಲ್ಲಿ ನಡೆಯುವ “ಕನ್ನಡ ಶಾಲೆಗಳ ಉಳಿವು -ಕನ್ನಡ ಭಾಷೆಯ ಉಳಿವು “ವಿಷಯದಲ್ಲಿ ನಡೆಯುವ “ಚಿಂತನ ಮಂಥನ “ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ “ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

One thought on “ಕನ್ನಡ ಶಾಲೆ ಉಳಿಸಿ- ಬೆಳೆಸಿ ಅಭಿಯಾನ : ನಾಳೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಕಾಸರಗೋಡಿನ ” ಕನ್ನಡಿಗರ ಸ್ನೇಹ ಸಂಗಮ “”
  1. ಕನ್ನಡ ಶಾಲೆ ಉಳಿಸಿ ಅಭಿಯಾನ ವೆಂಬ ಸುಳ್ಳಿನ ಕಂತೆ says:

    ಕನ್ನಡ ಶಾಲೆ ಉಳಿಯಬೇಕು, ಕನ್ನಡ ಭಾಷೆ ಕೇರಳದ ಕಾಸರಗೋಡು ನಲ್ಲಿ ಉಳಿಯಬೇಕು ಎನ್ನುವವರು ಕರ್ನಾಟಕದ ಒಳಗೆ ಬಂದ ಕೂಡಲೇ ಕನ್ನಡ ಮಾತ್ರ ಬೇಕು ಎನ್ನುವ ಇಬ್ಬಗೆ ನೀತಿಯನ್ನು ತೋರಿಸುತ್ತಾ ಇರುವಾಗ ಇವರ ಹೋರಾಟವನ್ನು ನಂಬುವುದಾದರೂ ಹೇಗೆ?

    ಕೇರಳದಲ್ಲಿ ಕನ್ನಡ ಬೇಕು, ಅದೇ ಕರ್ನಾಟಕದ ಲ್ಲಿ ಇರುವ ಮಲಯಾಳಂ,ತಮಿಳು,ಮರಾಠಿ,ತೆಲುಗು ಉರ್ದು ಶಾಲೆಗಳು ಯಾಕೆ ಬೇಡ ?
    ಗಡಿಭಾಗದಲ್ಲಿರುವ ಈ ವಿಭಿನ್ನ ಭಾಷೆಗಳ ಮಕಳಿಗೆ ಮಾತ್ರ ಕನ್ನಡ ವನ್ನು ಹೇರಿಕೆ ಮಾಡುವುದಾದರೂ ಯಾಕೆ ?

    ಈ ಪ್ರಶ್ನೆಗೆ ಉತ್ತರಿಸಿಯಾರೇ???

Leave a Reply

Your email address will not be published. Required fields are marked *