ಬೆಂಗಳೂರು : ನೇತ್ರಾವತಿ ಕ್ಯಾಬ್ ಚಾಲಕರ ವತಿಯಿಂದ ಸೆಪ್ಟೆಂಬರ್ 22ರಂದು ‘ನೇತ್ರಾವತಿ ಸ್ಪೋರ್ಟ್ಸ್ ಡೇ – ಸೀಸನ್ 03’ ಕ್ರೀಡಾ ಹಬ್ಬವನ್ನು eagleton sports park  Bengaluru ಸ್ಥಳದಲ್ಲಿ ಆಯೋಜಿಸಲಾಗಿದೆ.

ಕ್ಯಾಬ್ ಚಾಲಕರ ನಡುವೆ ಸ್ನೇಹ, ಒಗ್ಗಟ್ಟು ಹಾಗೂ ಕ್ರೀಡಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾ ಹಬ್ಬದಲ್ಲಿ ಚಾಲಕರು ಉತ್ಸಾಹದಿಂದ ಭಾಗವಹಿಸಲಿದ್ದು, ಕಾರ್ಯಕ್ರಮದ ಮೂಲಕ ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.



ನೇತ್ರಾವತಿ ಕ್ಯಾಬ್ ಚಾಲಕರ ಈ ಕ್ರೀಡಾ ಹಬ್ಬಕ್ಕೆ ಆಯೋಜಕರು ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಸುಮಾರು 400+ ಕ್ಯಾಬ್ ಡ್ರೈವರ್ ಗಳು ಸೇರಿ ಮಾಡಿರುವ ವಾಟ್ಸಾಪ್  ಗ್ರೂಪ್ ವತಿಯಿಂದ ನಡೆಯುತ್ತಿರುವ ಈ ಕ್ರೀಡಾ ಕೂಟ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *