ಸುಳ್ಯ : ತಾಲೂಕು ಮೀಲಾದ್ ಸಮಿತಿ, ಸುಳ್ಯ ವತಿಯಿಂದ ನಡೆಯಲಿರುವ ಬೃಹತ್ ಮೀಲಾದ್ ರ‍್ಯಾಲಿಗೆ ಮೆರುಗು ನೀಡಲು ಮುಹಿಯುದ್ದೀನ್ ಜುಮಾ ಮಸೀದಿ, ಕಡಂಗ ಇದರ ಟೀಮ್ ಕಡಂಗ ಮೆಗಾ ಡಫ್ ತಂಡ ಸಜ್ಜಾಗಿದೆ. 100 ಜನರ ಮೆಗಾ ತಂಡ ಇದಾಗಿಧೆ.
ಟೀಮ್ ರೋಜಾ ಪ್ರಾಯೋಜಕತ್ವದಲ್ಲಿ ಹಾಗೂ ನಾಫಿಹ್ ಸಿ.ಎ. ಅವರ ನೇತೃತ್ವದಲ್ಲಿ ತಂಡವು ರ‍್ಯಾಲಿಯಲ್ಲಿ ಭವ್ಯ ದಫ್ ಪ್ರದರ್ಶನ ನೀಡಲಿದೆ.
ದಫ್‌ನ ರೋಮಾಂಚಕ ತಾಳ-ಲಯದೊಂದಿಗೆ ರ‍್ಯಾಲಿಗೆ ವಿಶೇಷ ಮೆರುಗು ನೀಡಲಿರುವ ಟೀಮ್ ಕಡಂಗ ಮೆಗಾ ದಫ್ ತಂಡದ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವವರು ಮುಹಿಯುದ್ದೀನ್ ಜುಮಾ ಮಸೀದಿ, ಕಡಂಗ .
