ಕೊಡಗು: ಕಾಡಾನೆ ದಾಳಿಗೆ ತೋಟದ ಮಾಲೀಕ ಬಲಿ; ಹುತ್ತರಿ ಹಬ್ಬದ ಸಂಭ್ರಮದ ಬೆನ್ನಲ್ಲೇ ದುರಂತ
ಪಾಲಿಬೆಟ್ಟ: ತೋಟಕ್ಕೆ ಕದಿರು ಕಟ್ಟಲು ತೆರಳಿದ್ದ 50 ವರ್ಷದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ನವೆಂಬರ್ 25ರ ಗುರುವಾರ ಬೆಳ್ಳಂಬೆಳಗ್ಗೆ ಕೊಡಗು ಜಿಲ್ಲೆಯ ಪಾಲಿಬೆಟ್ಟ ಸಮೀಪದ ಚನ್ನಯ್ಯನಕೋಟೆಯ ಅಬ್ಬೂರು ಗ್ರಾಮದ ತಾರೀಕಟ್ಟೆಯಲ್ಲಿ ನಡೆದಿದೆ. ಮೃತರನ್ನು ಅಬ್ಬೂರು ತಾರೀಕಟ್ಟೆ ನಿವಾಸಿ…




