ಸುಳ್ಯ ರೇಂಜ್ ಮಟ್ಟದ ಕಲಾ-ಸಾಹಿತ್ಯ ಸ್ಪರ್ಧೆ; ‘ಸಾಹಿತ್ಯ ಅರಳಲಿ, ಪ್ರತಿಭೆಗಳು ಬೆಳೆಯಲಿ’ ಧ್ಯೇಯವಾಕ್ಯ
ಸುಳ್ಯ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ಜೆಎಂ) ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಮದರಸ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಕಲಾ ಮತ್ತು ಸಾಹಿತ್ಯ ಸ್ಪರ್ಧೆಗಳ ಪ್ರತಿಭೋತ್ಸವ ಕಾರ್ಯಕ್ರಮ ಈ ಬಾರಿ ‘ಸಾಹಿತ್ಯ ಅರಳಲಿ, ಪ್ರತಿಭೆಗಳು ಬೆಳೆಯಲಿ’ ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿದೆ.



ಇದರ ಅಂಗವಾಗಿ ಸುಳ್ಯ ರೇಂಜ್ ಎಸ್ಜೆಎಂ ವತಿಯಿಂದ ರೇಂಜ್ ಮಟ್ಟದ ಪ್ರತಿಭೋತ್ಸವವನ್ನು ನವೆಂಬರ್ 22ರಂದು ಭಾನುವಾರ ಪೆರಾಜೆಯ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ಆಯೋಜಿಸಲಾಗಿದೆ.



ಮದರಸ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರ ಕಲಾ ಮತ್ತು ಸಾಹಿತ್ಯಿಕ ಅಭಿರುಚಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.



ಪ್ರತಿಭೋತ್ಸವದ ಕಾರ್ಯಕ್ರಮದ ಪೋಸ್ಟರ್ ಅನ್ನು ರೇಂಜ್ ಪದಾಧಿಕಾರಿಗಳ ಸಭೆಯ ಬಳಿಕ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಪದಾಧಿಕಾರಿಗಳು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.



