ಸುಂಟಿಕೊಪ್ಪ :7ನೇ ಹೊಸಕೋಟೆ ಸರಕಾರಿ ಶಾಲಾ ಹಿರಿಯ ವಿದ್ಯಾರ್ಥಿ ಬಳಗದ ವತಿಯಿಂದ ನಡೆದ 4ನೇ ವರುಷದ ಅದ್ಧೂರಿ ಕನ್ನಡ ರಾಜ್ಯೋತ್ಸವದ ಭುವನೇಶ್ವರಿ ದೇವಿಯ ಭವ್ಯ ಕನ್ನಡ ತೇರು ಗ್ರಾಮದ ಮುಖ್ಯ ಬೀದಿಯಲ್ಲಿ ಸಾಗಿ ಸರ್ಕಾರಿ ಶಾಲಾ ಆವರಣಕ್ಕೆ ಭವ್ಯ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು.

ಪ್ರೌಢಶಾಲಾ ಬಳಿಯಿಂದ ಭವ್ಯ ಮೆರವಣಿಗೆಗೆ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸಾವಿತ್ರಿರವರು ಚಾಲನೆ ನೀಡಿದರು.
ಶಾಲಾ ಮೈದಾನದಿಂದ ಹೊರಟ ಭವ್ಯ ಮೆರವಣಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಮೆಟ್ನಳ್ಳಿ, ಯೂನಿಯನ್ ಬ್ಯಾಂಕ್ ಸರ್ಕಲ್ ಬಳಿ ತೆರಳಿ ಮತ್ತೆ ಶಾಲಾ ಮೈದಾನಕ್ಕೆ ಆಗಮಿಸಿತು.

ಕನ್ನಡಾಂಬೆಯ ಭವ್ಯ ಮೆರವಣಿಗೆಯಲ್ಲಿ ಚಂಡೆ ವಾದ್ಯಗಳು, ಗೊಂಬೆಗಳ ಪ್ರದರ್ಶನ, ನೃತ್ಯ ತಂಡದ ಕಲಕಾರದಿಂದ ನೃತ್ಯ ಸಂಭ್ರಮ ಆಕರ್ಷಣೆಯಾಗಿತ್ತು. ಮೆರವಣಿಗೆಯಲ್ಲಿ ಕನ್ನಡ ಪರ ಸಂಘಟನೆಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಊರಿನ ಸಹಸ್ರಾರು ಮಂದಿ ಭಾಗವಹಿಸಿದ್ದರು

ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಸ್ಥಳೀಯ ಕ್ರೀಡಾಭಿಮಾನಿಗಳು ಭಾಗವಹಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ನೂರಾರು ಮಂದಿ ಭೋಜನ ಸ್ವೀಕರಿಸಿದರು.
ಸಂಜೆ ಸಾರ್ವಜನಿಕರಿಂದ ಮತ್ತು ಶಾಲಾ ಮಕ್ಕಳಿಂದ ಕನ್ನಡಾಭಿಮಾನಿಗಳನ್ನು ರಂಜಿಸಲು ಕನ್ನಡ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕೊನೆಗೆ ಮುಖ್ಯ ಅತಿಥಿಗಳು, ಗಣ್ಯ ವ್ಯಕ್ತಿಗಳು, ಸಮಾಜಸೇವಕರನ್ನು ಒಳಗೊಂಡ ಸಭೆಯೊಂದಿಗೆ ಕಾರ್ಯಕ್ರಮದ ಮುಕ್ತಾಯಗೊಳ್ಳಲಿದೆ.

Leave a Reply

Your email address will not be published. Required fields are marked *