ಸುಳ್ಯ ತಾಲೂಕು ಆಟೋ ಚಾಲಕರ ಸಂಘ ಬಿ.ಯಂ.ಎಸ್. ಸಂಯೋಜಿತ ಇದರ ಅಂಗವಾಗಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದ 27ನೆಯ ವರ್ಷದ ಕಾರ್ಯಕ್ರಮ ನವಂಬರ್ 28ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಲೋಕಕಲ್ಯಾಣಾರ್ಥವಾಗಿ ಹಾಗೂ ಸಂಘದ ಸರ್ವಸದಸ್ಯರ ಶ್ರೇಯೋಭಿವೃದ್ಧಿಗಾಗಿ ವೇ. ಮೂ. ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಇವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮ ನಡೆಯಲಿದ್ದು
ಬೆಳಿಗ್ಗೆ ಘಂಟೆ 9-00ಕ್ಕೆ ದೀಪಾರಾಧನೆ, 9-30ಕ್ಕೆ ಸಾಮೂಹಿಕ ಪ್ರಾರ್ಥನೆ, ಪೂರ್ವಾಹ್ನ ಘಂಟೆ 10-00 ರಿಂದ ಸಾರ್ವಜನಿಕ ಸಂಕಲ್ಪ ಪ್ರಾರಂಭ, ಮಧ್ಯಾಹ್ನ ಘಂಟೆ 12-00 ರಿಂದ : ಶ್ರೀ ದೇವರಿಗೆ ಮಹಾಪೂಜೆ,ಮಧ್ಯಾಹ್ನ ಘಂಟೆ 1-00 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಎಲ್ಲಾ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡುವಂತೆ ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *