ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಜೂನಿಯರ್ ಕಾಲೇಜ್ ನ 9 ಮಂದಿ ವಿದ್ಯಾರ್ಥಿಗಳು ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆ, 27 ವರ್ಷಗಳ ಬಳಿಕ ಇತಿಹಾಸ ನಿರ್ಮಾಣ
ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಪಂದ್ಯಾವಳಿಯಲ್ಲಿ ಮಾದಾಪುರದ ಚೆನ್ನಮ್ಮ ಕಾಲೇಜು ಅನ್ನು ಪ್ರತಿನಿಧಿಸಿದಂತ ಕೊಡಗು ಬಾಲಕರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿದ್ದು 27 ವರ್ಷಗಳ ಬಳಿಕ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದು ಇತಿಹಾಸ ನಿರ್ಮಿಸಿದೆ.
ಈ ಪಂದ್ಯಾಟದಲ್ಲಿ ವಿಶೇಷವಾಗಿ ಮಾದಾಪುರ ಶ್ರೀಮತಿ ಡಿ ಚನ್ನಮ್ಮ ಪದವಿ ಪೂರ್ವ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಕೊಡಗು ತಂಡವು ಬೆಂಗಳೂರು ಉತ್ತರ ತಂಡವನ್ನ ಟ್ರೈಕರ್ ನಲ್ಲಿ 4–1 ಗೋಲುಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿತು.

ಮುಂದಿನ ರಾಷ್ಟ್ರೀಯ ಪಂದ್ಯಾಟ ಪಂಜಾಬ್ ರಾಜ್ಯದ ಲೂಧಿಯಾನದಲ್ಲಿ ಡಿಸೆಂಬರ್ 8 ರಿಂದ 12 ನಡೆಯಲಿದ್ದು ಈ ಪಂದ್ಯಕ್ಕೆ ಶ್ರೀಮತಿ ಡಿ ಚೆನ್ನಮ್ಮ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ತಂಡದ ತರಬೇತುದರರಾಗಿ ಚೆನ್ನಮ್ಮ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಶಕರಾದ ಮೂಕ ಚಂಡ ನಿರನ್ ನಾಚಪ್ಪ ರವರು ತರಬೇತುದಾರರಾಗಿ ಹಾಗು
ತಂಡದ ವ್ಯವಸ್ಥಾಪಕರಾಗಿ ವಿನೋದ್ ಜೆಸಿಬಿ ರವರು ಕಾರ್ಯನಿರ್ವಹಿಸಿರುತ್ತಾರೆ. ಕಾಲೇಜಿನ 9 ವಿದ್ಯಾರ್ಥಿಗಳು ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಕೊಡಗಿನ ಹಾಕಿ ಕ್ರೀಡಾ ಪ್ರಿಯರಿಗೆ ಸಂತಸವನ್ನು ಇಮ್ಮಡಿಗೊಳಿಸಿದ್ದು ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.












