ಕಲ್ಲುಗುಂಡಿ ಮುಹ್ಯದ್ದೀನ್ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಇದರ ಆಶ್ರಯದಲ್ಲಿ ದೊಡ್ಡಡ್ಕ ಮದರಸ ವಟಾರದಲ್ಲಿ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಹಾಗೂ ಏಕದಿನ ಪ್ರಭಾಷಣ ಕಾರ್ಯಕ್ರಮ ನವೆಂಬರ್ 22ರಂದು ನಡೆಯಲಿದೆ.
ಸ್ವಲಾತ್ ನೇತೃತ್ವ ಹಾಗೂ ಪ್ರಭಾಷಣವನ್ನು ಸಯ್ಯದ್ ಜಲಾಲುದ್ದೀನ್ ಅಲ್‌ಬುಖಾರಿ ತಂಙಳ್, ಕುನ್ನುಂಗೈ ಇವರು ನೆರವೇರಿಸಲಿದ್ದಾರೆ.
ಬಹು। ಅಬ್ದುಲ್ ನಾಸಿರ್ ದಾರಿಮಿ, ಖತೀಬರು, MJM ಕಲ್ಲುಗುಂಡಿ ಇವರು ಉದ್ಬೋದನ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲುಗುಂಡಿ ಜುಮಾಮಸೀದಿಯ ಅಧ್ಯಕ್ಷರಾದ ಆಲಿ ಹಾಜಿಯವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಟಿ. ಎಂ. ಶಹೀದ್, ಅಧ್ಯಕ್ಷರು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಹಾಗೂ ಗೌರವಾಧ್ಯಕ್ಷರು ಜುಮಾ ಮಸೀದಿ ಪೇರಡ್ಕ, ಜನಾಬ್ ಉಮ್ಮರ್ ಬೀಜದಕಟ್ಟೆ ಅಧ್ಯಕ್ಷರು ಸಜ್ಜನ ಪ್ರತಿಷ್ಠಾನ ಗೂನಡ್ಕ, ಗೌರವ ಉಪಸ್ಥಿತಿ ಯಲ್ಲಿ ಆಸೀಫ್ ಆಝ್ಹರಿ, ಖತೀಬರು ಜುಮಾ ಮಸೀದಿ ಆರಂತೋಡು, ಅಹ್ಮದ್ ನಈಮಿ ಮಅಬರಿ ಫೈಝಿ ಖತೀಬರು ಜುಮಾ ಮಸೀದಿ ಪೇರಡ್ಕ, ಅಶ್ರಫ್ ಸಖಾಫಿ ಅಲ್‌ಮಲ್ಹರಿ ಖತೀಬರು ಜುಮಾ ಮಸೀದಿ ಗೂನಡ್ಕ, ಲುಕ್ಕಾನುಲ್ ಹಕೀಂ ಫೈಝಿ, ಖತೀಬರು ಜುಮಾ ಮಸೀದಿ ಸಂಪಾಜೆ, ಅಲ್ ಹಾಜ್ ಸಿದ್ದೀಕ್ ಝುಪ್ರಿ ಖತೀಬರು ಜುಮಾ ಮಸೀದಿ ಕೊಯನಾಡು ಹಾಗೂ ವಿವಿಧ ಉಮರಾ ನೇತಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗುತ್ತದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

