ಕುಶಾಲನಗರ: ಕುಶಾಲನಗರ ತಾಲೂಕು ಕಚೇರಿಗೆ ನೂತನ ತಹಶೀಲ್ದಾರ್ (ತಾಲೂಕು ದಂಡಾಧಿಕಾರಿ) ಆಗಿ ಕರ್ತವ್ಯಕ್ಕೆ ಆಗಮಿಸಿರುವ ರಮೇಶ್ ಬಾಬು ಅವರನ್ನು ಕೊಡಗು ಅಭಿವೃದ್ಧಿ ಸಮಿತಿಯ ಕುಶಾಲನಗರ ತಾಲೂಕು ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ನವೆಂಬರ್ 17ರಂದು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು.



ತಹಶೀಲ್ದಾರ್ ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು ಹೂಮಾಲೆ ಹಾಕಿ ನೂತನ ತಹಶೀಲ್ದಾರ್ ಅವರನ್ನು ಅಭಿನಂದಿಸಿ, ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಕೊಡಗು ಅಭಿವೃದ್ಧಿ ಸಮಿತಿಯ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ನಾಗೇಂದ್ರ ಕೆ.ಎನ್., ಉಪಾಧ್ಯಕ್ಷರಾದ ನೌಶಾದ್ ಕೂಡಿಗೆ ಹಾಗೂ ದಿನೇಶ್ ಕುಮಾರ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಸಮಿತಿ ಸಲಹೆಗಾರ ಪಿ.ಕೆ. ಯಾದವ್, ತಾಲೂಕು ಸಮಿತಿ ಸಂಚಾಲಕ ಗೋವಿಂದರಾಜ್ ಪಿ.ಸಿ., ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಉತ್ತಪ್ಪ, ಉಪಾಧ್ಯಕ್ಷೆ ಪದ್ಮಾವತಿ, ಕಾರ್ಯದರ್ಶಿ ರೇಖಾ ವಿನೋದ್, ನಗರ ಸಮಿತಿ ಅಧ್ಯಕ್ಷೆ ಶೈಲಾ ಕುಶಾಲಪ್ಪ ಹಾಗೂ ಕಾರ್ಯದರ್ಶಿ ಅಂಬಿಕಾ ಸೇರಿದಂತೆ ಸಮಿತಿಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.






