ನ್ಯಾಯಾಲಯದ ನಿರ್ದೇಶನ ಉಲ್ಲಂಘಿಸಿ ದೀಪ ಬೆಳಗಿಸಿದ ಹಿನ್ನೆಲೆಯಲ್ಲಿ ಕ್ರಮ

ದೇವಸ್ಥಾನದ ಆಡಳಿತಕ್ಕೆ ಮಾಜಿ ನ್ಯಾಯಮೂರ್ತಿಗಳ ನೇಮಕ, ಭದ್ರತೆ ಹೊಣೆ ಸಿಆರ್‌ಪಿಎಫ್‌ಗೆ

ಹೊಸದಿಲ್ಲಿ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ದೇವಸ್ಥಾನದ ಬೆಟ್ಟದ ಮೇಲಿರುವ ದೀಪತ್ತೂನ್‌ನ ಕಲ್ಲಿನ ಸ್ತಂಭದಲ್ಲಿ ಕಾರ್ತಿಗೈ ದೀಪಂ ಬೆಳಗಿಸುವಂತೆ ನೀಡಿದ್ದ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಅಮಾನತುಗೊಳಿಸಿದೆ.

ನ್ಯಾಯಾಲಯದ ಆದೇಶದಂತೆ ದೀಪತ್ತೂನ್‌ನಲ್ಲಿ ದೀಪ ಬೆಳಗಿಸುವ ಬದಲು, ಬೆಟ್ಟದ ಮೇಲಿರುವ ದೀಪ ಮಂಟಪದಲ್ಲಿ ದೀಪ ಬೆಳಗಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

ಅಲ್ಲದೆ, ಉಚ್ಚಿಪಿಳ್ಳೆಯಾರ್ ಮಂಟಪದಲ್ಲಿ ಬೆಳಗಿಸಲಾದ ಜ್ಯೋತಿಯಿಂದ ಶನಿವಾರ ತಿರುಪ್ಪರಂಕುಂದ್ರಂ ಬೆಟ್ಟದ ದೀಪತ್ತೂನ್‌ನಲ್ಲಿ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ದೇವಸ್ಥಾನದ ಆಡಳಿತದ ಉಸ್ತುವಾರಿ ವಹಿಸಿಕೊಂಡು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಮಾಜಿ ನ್ಯಾಯಮೂರ್ತಿಗಳಿಗೆ ವಹಿಸಲಾಗಿದೆ. ದೇವಸ್ಥಾನದ ಭದ್ರತೆ ನಿರ್ವಹಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸಿಆರ್‌ಪಿಎಫ್ ಕಮಾಂಡೆಂಟ್‌ಗೆ ನಿರ್ದೇಶನ ನೀಡಿದೆ.

ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ದೀಪತ್ತೂನ್‌ನ ಕಲ್ಲಿನ ಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿ ನವೆಂಬರ್ 20ರಂದು ನೀಡಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *