ಸುಳ್ಯ: 2027ರ ಜನವರಿ 28ರಿಂದ 31ರವರೆಗೆ ಕೇರಳದ ಮಲಪ್ಪುರಂನಲ್ಲಿ ನಡೆಯಲಿರುವ ಸಮಸ್ತ ಸೆಂಟಿನರಿ ಕಾನ್ಫರೆನ್ಸ್‌ನ ಪ್ರಚಾರಾರ್ಥವಾಗಿ ಸುಳ್ಯ ಇ.ಸಿ. ಝೋನ್ ಹಾಗೂ ಡಿವಿಷನ್ ವತಿಯಿಂದ ಸೆಷನ್ ಮತ್ತು ಪ್ರಚಾರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಅ. 30ರಂದು ಮೊಗರ್ಪಣೆ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಸೆಂಟಿನರಿ ಸುಳ್ಯ ತಾಲೂಕು ಇ.ಸಿ. ಅಧ್ಯಕ್ಷ ಹಸ್ಸನ್ ಸಖಾಫಿ ಬೆಳ್ಳಾರೆ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಮೊಗರ್ಪಣೆ ಮಸೀದಿ ಮತ್ತು ಮದ್ರಸದ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ಮುದುಗುಡ ಉದ್ಘಾಟಿಸಿದರು.
ಕಾಸರಗೋಡಿನ ಅಶ್ಅರಿಯಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಮುಹಮ್ಮದಲಿ ಸಖಾಫಿ ಅಶ್ಅರಿಯಾ ಮುಖ್ಯ ಭಾಷಣ ಮಾಡಿ, ಸಂಘಟನೆಯ ಮಹತ್ವವನ್ನು ವಿವರಿಸಿದರು. ಸಮಸ್ತ ಸೆಂಟಿನರಿ ಕಾನ್ಫರೆನ್ಸ್‌ನ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕೌನ್ಸಿಲರ್ ಅಬ್ದುಲ್ ಹಮೀದ್ ಸುಣ್ಣಮೂಲೆ, ಬೆಳ್ಳಾರೆ ಸರ್ಕಲ್ ಇ.ಸಿ. ಅಧ್ಯಕ್ಷ ಹಸ್ಸನ್ ಹಾಜಿ ಇಂದ್ರಾಜೆ, ಸುಳ್ಯ ಸರ್ಕಲ್ ಇ.ಸಿ. ಅಧ್ಯಕ್ಷ ಅಬ್ದುಲ್ ರಶೀದ್ ಝೈನಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಪೈಂಬೆಚ್ಚಾಲು, ಕೆ.ಎಂ.ಜೆ. ಸುಳ್ಯ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಹಾಗೂ ಎಸ್.ವೈ.ಎಸ್. ಸುಳ್ಯ ಝೋನ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇ.ಸಿ. ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ರಿಹಾನ್ ಸಅದಿ ಸ್ವಾಗತಿಸಿದರು. ಕೋಆರ್ಡಿನೇಟರ್ ಶಮೀರ್ ಮೊಗರ್ಪಣೆ ವಂದಿಸಿದರು. ಹಮೀದ್ ಸುಣ್ಣಮೂಲೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಜೆ., ಎಸ್.ವೈ.ಎಸ್., ಎಸ್.ಎಸ್.ಎಫ್., ಎಸ್.ಎಂ.ಎ. ಹಾಗೂ ಎಸ್.ಜೆ.ಎಂ. ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
