ಸಮಸ್ತ ನೂರನೇ ವರ್ಷಾಚರಣೆಯನ್ನು ವಿಜಯಗೊಳಿಸಿ: ಅಬ್ದುಲ್ ರಶೀದ್ ಸಕಾಫಿ ಪತ್ತಪಿರಿಯಂ
ಮಕ್ಕಳನ್ನು ಕೆಟ್ಟ ಚಟಗಳಿಂದ ರಕ್ಷಿಸಲು ಸುನ್ನೀ ಸಂಘಟನೆಗಳು ಸಹಕಾರಿ : ಕೆ ಎಂ ಜೆ ಕೊಡಗು ಜಿಲ್ಲಾ ಅಧ್ಯಕ್ಷ ಲತೀಫ್ ಪಿ ಎಂ
ಸುಂಟಿಕೊಪ್ಪ : ಎಸ್ ವೈ ಎಸ್ ಸೋಮವಾರಪೇಟೆ ಝೋನ್ ಅಧೀನದಲ್ಲಿ ನ 24 ರಂದು ಸುಂಟಿಕೊಪ್ಪ ಕೊಡವ ಸಮಾಜ ವಠಾರದಲ್ಲಿ ಅಸ್ಸುನ್ನ ಸುನ್ನೀ ಆದರ್ಶ ಸಮ್ಮೇಳನ ಹಾಗು ಸಯ್ಯಿದ್ ಅಲಿ ಬಾಫಖೀ ತಂಙಳ್ ರವರ ಅನುಷ್ಮರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋಗ್ರಾಮ್ ಸಮಿತಿಯ ಚೇರ್ಮೆನ್ ಸೌಕತ್ ರವರು ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಉದ್ಯಮಿ ಪಿ ಎಂ ಲತೀಫ್ ರವರು ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ‘ಸುನ್ನೀ ಸಂಘಟನೆಗಳು ಸಮಾಜದಲ್ಲಿ ಉತ್ತಮ ಸಂದೇಶ ನೀಡಲು ಕಾರಣವಾಗಿದೆ. ದುಶ್ಚಟಗಳಿಂದ ಮಕ್ಕಳನ್ನು ರಕ್ಷಿಸಲು ಸುನ್ನೀ ಸಂಘಟನೆಗಳು ಮಾರ್ಗದರ್ಶನವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲತೀಫ್ ರವರಿಗೆ ಸಂಘಟನೆ ವತಿಯಿಂದ ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಿದ್ದ ಖ್ಯಾತ ವಾಗ್ಮಿ ಅಬ್ದುಲ್ ರಶೀದ್ ಸಖಾಫಿ ಪತ್ತಪಿರಿಯಂ ರವರು ಮಾತನಾಡಿ ಸಮಸ್ತ ಕೇರಳ ಸುನ್ನೀ ಜಂಮಿಯ್ಯತುಲ್ ಉಲಮಾ ಇದರ ವತಿಯಿಂದ ಕೇರಳದ ಮಲಪ್ಪುರಂ ವಾದಿ ಹರಮೈನ್ ನಲ್ಲಿ 2027 ಜ 28, 29, 30, 31ನಡೆಯುವ ಸಮಸ್ತ ನೂರನೇ ವರ್ಷದ ಸಮ್ಮೇಳನವನ್ನು ವಿಜಯಗೊಳಿಸಬೇಕೆಂದು ಕರೆ ನೀಡಿದರು.

ಸಂಜೆ 4 ಗಂಟೆಗೆ ಎಸ್ ವೈ ಎಸ್ ಮುಖಂಡರಾದ ಉದ್ಯಮಿ ಸೌಕತ್ ಸುಂಟಿಕೊಪ್ಪ ರವರು ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.
ಸೋಮವಾರಪೇಟೆ ತಾಲೂಕು ಸಿ ಜೆ ಯು ಅಧ್ಯಕ್ಷರಾದ ನೌಶಾದ್ ಝುಹ್ರಿ ರವರು ಉದ್ಘಾಟನಾ ಪ್ರಾರ್ಥನೆಯನ್ನು ಮಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಜಂಞ್ಯತುಲ್ ಉಲಮಾ ಅಧ್ಯಕ್ಷರಾದ ಅಶ್ರಫ್ ಅಹ್ಸನಿ, ಎಸ್ ವೈ ಎಸ್ ಕೊಡಗು ಜಿಲ್ಲಾ ಅಧ್ಯಕ್ಷ ಮುನೀರ್ ಮಹ್ಲರಿ ,ಎಸ್ ಜೆ ಎಂ ಕೊಡಗು ಜಿಲ್ಲಾ ಅಧ್ಯಕ್ಷ ಅಬ್ದುಲ್ಲಾ ಸಾಖಫಿ ರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಎಸ್ ವೈ ಎಸ್ ಸೋಮವಾರಪೇಟೆ ಝೋನ್ ಅಧ್ಯಕ್ಷರಾದ ರಷಾದ್ ನಲ್ಲಿಹುದಿಕೇರಿ , ಕೆ ಎಂ ಜೆ ಸೋಮವಾರಪೇಟೆ ಝೋನ್ ಕಾರ್ಯದರ್ಶಿವಿ ಪಿ ಮೊಯಿದಿನ್,
ಎಸ್ ಎಸ್ ಎಫ್ ಕೊಡಗು ಜಿಲ್ಲಾ ಅಧ್ಯಕ್ಷ ಖಮರುದ್ದಿನ್ ಸಖಾಫಿ ,ಗದ್ದೆಹಳ್ಳ ಮಸೀದಿ ಖತೀಬ್ ಹಝೀಝ್ ಮುಸ್ಲಿಯಾರ್, ಸಿ ಎಂ ಹಮೀದ್ ಮೌಲವಿ ಸುಂಟಿಕೊಪ್ಪ, ಎಸ್ ಜೆ ಎಂ ಕೊಡಗು ಜಿಲ್ಲಾ ಕೋಶಾಧಿಕಾರಿ ಮುಸ್ತಫಾ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಾಜ ಸೇವೆಯ ಭಾಗವಾಗಿ ಎಸ್ ಜೆ ಎಂ ಸೋಮವಾರಪೇಟೆ ರೇಂಜ್ ವತಿಯಿಂದ ಎಸ್ ವೈ ಎಸ್ ಝೋನ್ ಸಮಿತಿಗೆ ವೀಲ್ ಚೇರ್ ಅನ್ನು ಹಸ್ತಾಂತರಿಸಲಾಯಿತು. ಸಮ್ಮೇಳನದಲ್ಲಿ ತಾಲೂಕಿನ ವಿವಿಧ ಭಾಗಗಳ ಜಮಾಅತ್ ಅಧ್ಯಕ್ಷರುಗಳು ಹಾಗೂ ನೂರಾರು ಮಂದಿ ಮುಸ್ಲಿಂ ಭಾಂದವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು. ಹಂಝ ರಹ್ಮಾನಿ ಕಂಡಕ್ಕರೆ ಸ್ವಾಗತಿಸಿ ಅಝೀಝ್ ಸಖಾಫಿ ಕಾರ್ಯಕ್ರಮ ನಿರೂಪಿಸಿ
ಉಮ್ಮರ್ ಮಾಸ್ಟರ್ ಸುಂಟಿಕೊಪ್ಪ ವಂದಿಸಿದರು.

ಕಾರ್ಯಕ್ರಮಕ್ಕೆ ಪ್ರೋಗ್ರಾಮ್ ಸಮಿತಿಯ ಕಂನ್ವಿನರ್ ಅಝೀಝ್ ಕೋಯಾಸ್, ಕೋಶಾಧಿಕಾರಿ ಶಾಹುಲ್ ಹಮೀದ್, ಶರೀಫ್ ಆಟೋ,ರಫೀಕ್ ಆಟೋ, ರ
ಎಸ್ ವೈ ಎಸ್ ಸೋಮವಾರಪೇಟೆ ಝೋನ್ ಸಂಘಟನಾ ಕಾರ್ಯದರ್ಶಿ ರಫೀಕ್ ಲತೀಫಿ, ಹೊಸತೋಟ ಇಸಾಬ ಕಾರ್ಯದರ್ಶಿ ಸಿದ್ದೀಖ್, ಸಮದ್ ಬೋಯಿಕೇರಿ,ಮುತ್ತಲಿಬ್ ನೆಲ್ಲಿಹುದಿಕೇರಿ, ಎಸ್ ವೈ ಎಸ್ ಸೋಮವಾರಪೇಟೆ ಝೋನ್ ಸಮಿತಿಯ ಸದಸ್ಯರುಗಳು ಹಾಗೂ ಪ್ರೋಗ್ರಾಮ್ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಸುಂಟಿಕೊಪ್ಪ ಎಸ್ ವೈ ಎಸ್,ಎಸ್ ಎಸ್ ಎಫ್ ಯೂನಿಟ್ ಪದಾಧಿಕಾರಿಗಳು ಸಹಕರಿಸಿದರು.










