ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ ಪಕ್ಕದಲ್ಲಿಯೇ ಅನೇಕ ಶಿಕ್ಷಣ ಕೇಂದ್ರಗಳಿದ್ದು ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡೆದಾಡಿಕೊಂಡಿರುತ್ತಾರೆ. ಆದರೆ ಇಲ್ಲೇ ಇರುವ ಫುಟ್ಬಾತ್ ಬಳಿ ಕಾಡು ಬಳ್ಳಿಗಳ ರಾಶಿ ಎತ್ತರವಾಗಿ ಬೆಳೆದು ನಿಂತಿದ್ದು ಇದರಲ್ಲಿ ವಿಷ ಜಂತುಗಳು ಇರುವ ಆತಂಕವೂ ಕಂಡುಬರುತ್ತಿದೆ.

ಈ ದೃಶ್ಯವು ನಗರದ ಮುಖ್ಯ ಬೀದಿಯಲ್ಲಿ ಇದ್ದು ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಅಧಿಕಾರಿಗಳಿಗೆ ಕಾಣದೇ ಇರುವುದು ವಿಪರ್ಯಾಸ ಸಂಗತಿಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ಎಚ್ಚೆತ್ತು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *