ಶ್ರೀ ಗಣಪತಿ ರಥೋತ್ಸವದ ಅಂಗವಾಗಿ ಎ.ಜೆ. ಫಿಟ್ನೆಸ್ ಹಾಗೂ ಟೀಮ್ ಚಾಮುಂಡೇಶ್ವರಿ ಯುವಕ ಸಂಘದಿಂದ ದ್ವಿತೀಯ ವರ್ಷದ ಆಯೋಜನೆ

ಕುಶಾಲನಗರ: ಶ್ರೀ ಗಣಪತಿ ರಥೋತ್ಸವದ ಅಂಗವಾಗಿ ಎ.ಜೆ. ಫಿಟ್ನೆಸ್ ಹಾಗೂ ಟೀಮ್ ಚಾಮುಂಡೇಶ್ವರಿ ಯುವಕ ಸಂಘದ ವತಿಯಿಂದ ಎರಡನೇ ವರ್ಷದ ದೇಹದಾಢ್ಯ ಸ್ಪರ್ಧೆಯನ್ನು ಡಿಸೆಂಬರ್ 10ರಂದು ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ವಿವಿಧ ಭಾಗಗಳ ದೇಹದಾಢ್ಯ ಪಟುಗಳು ಪಾಲ್ಗೊಳ್ಳಲಿದ್ದು, ಪ್ರತಿಷ್ಠಿತ ಮಿಸ್ಟರ್ ಕೊಡಗು ಪ್ರಶಸ್ತಿಗಾಗಿ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಲು ರೂ. 1,000 ನೋಂದಣಿ ಶುಲ್ಕ ನಿಗದಿಪಡಿಸಲಾಗಿದ್ದು, ಕೊಡಗು ಜಿಲ್ಲೆಯ ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಾಳುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಈಗಾಗಲೇ ಮಿಸ್ಟರ್ ಕೊಡಗು ಪ್ರಶಸ್ತಿ ಪಡೆದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ಶಾರ್ಟ್, ಮೀಡಿಯಂ, ಟಾಲ್ ಹಾಗೂ ಸೂಪರ್ ಟಾಲ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 15 ವರ್ಷದೊಳಗಿನ ಮಕ್ಕಳಿಗಾಗಿ ಕಿಡ್ಸ್ ವಿಭಾಗವನ್ನೂ ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಲಾಗುವುದು. ಮಿಸ್ಟರ್ ಕೊಡಗು, ಬೆಸ್ಟ್ ಪೋಸರ್ ಹಾಗೂ ಮೋಸ್ಟ್ ಮಸ್ಕ್ಯುಲರ್ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು 7204359331 ಹಾಗೂ 9972016771 ದೂರವಾಣಿ ಸಂಖ್ಯೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಸಂಘಟಕರಾದ ಅಜಯ್ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *