ಕೇರಳದ ಜನರು ಹಾಗೂ ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ
ಗೋಣಿಕೊಪ್ಪ: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೇರಳದ ಜನರು ಹಾಗೂ ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ, ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಇಂದು ದೂರು ದಾಖಲಿಸಲಾಯಿತು.



ಪ್ರತಾಪ್ ಸಿಂಹ ಅವರ ಹೇಳಿಕೆಗಳು ಮಲಯಾಳಿ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದರ ಜತೆಗೆ ಸಮಾಜದಲ್ಲಿ ದ್ವೇಷ ಭಾವನೆ ಮೂಡಿಸುವ ಸಾಧ್ಯತೆಯಿದೆ ಎಂದು ಸಮಾಜದ ಪದಾಧಿಕಾರಿಗಳು ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.



ಈ ಸಂದರ್ಭದಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಪಿ. ಪ್ರಶಾಂತ್ ಕುಮಾರ್, ಸ್ಥಾಪಕ ಅಧ್ಯಕ್ಷ ಪಿ.ಎಸ್. ಶರತ್ ಕಾಂತ್, ಹಿರಿಯ ಉಪಾಧ್ಯಕ್ಷ ವೇಣುಕಣ್ಣನ್, ಸಮಾಜದ ಕಾನೂನು ಸಲಹೆಗಾರ ಕೆ.ಬಿ. ಸಂಜೀವ್, ಮಾಜಿ ಗೌರವಾಧ್ಯಕ್ಷ ಪಿ. ಭಾಸ್ಕರ್ ಹಾಗೂ ಸದಸ್ಯರಾದ ವಿ.ಆರ್. ಸುಧೀರ್, ಸಪ್ತೇಶ್, ರಾಮಕೃಷ್ಣನ್, ಮಣಿಕಂಠ ಕೆ. ಮತ್ತು ರಾಘವನ್ ಎ.ಎ. ಉಪಸ್ಥಿತರಿದ್ದರು.



ಸಮಾಜದ ಪರವಾಗಿ ಪದಾಧಿಕಾರಿಗಳು ದೂರಿನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.







