ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಜನತೆ ಸಂಕಷ್ಟಕ್ಕೆ: ಕೆ.ಜಿ. ಬೋಪಯ್ಯ ಆರೋಪ
ವಿರಾಜಪೇಟೆ: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಅನುಷ್ಠಾನದಲ್ಲಿನ ವೈಫಲ್ಯದಿಂದಾಗಿ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಆರೋಪಿಸಿದರು. ಅಮ್ಮತ್ತಿ ಸಮೀಪದ ಇಂಜಿಲಗೆರೆ ಪುಲಿಯೇರಿ ಗ್ರಾಮದ ಎಸ್ಎನ್ಡಿಪಿ ಶಾಖೆಯ ಸಭಾಂಗಣದಲ್ಲಿ…
ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಎಸ್ಡಿಪಿಐ ಪಟ್ಟು; ಪೋಸ್ಟರ್ ಅಭಿಯಾನದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ
ಮಂಗಳೂರು: ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಎಸ್ಡಿಪಿಐ ಹೋರಾಟ ತೀವ್ರಗೊಳಿಸಿದೆ. ಹೋರಾಟದ ಮುಂದುವರಿದ ಭಾಗವಾಗಿ ಟೋಲ್ ಗೇಟ್ ಬಳಿ ಪೋಸ್ಟರ್ ಬಿಡುಗಡೆಗೊಳಿಸಿ ಜಾಗೃತಿ ಅಭಿಯಾನ ನಡೆಸಿದ ಪಕ್ಷದ ಮುಖಂಡರು, ಟೋಲ್ ತೆರವುಗೊಳಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ…
ಬಾಳೆಗೊನೆಗಳಲ್ಲಿ ಮಾದಕ ವಸ್ತು ಬಚ್ಚಿಟ್ಟು ಸಾಗಾಟ; ಪ್ರಶಸ್ತಿ ವಿಜೇತ ಕೃಷಿಕನ ಬಂಧನ
ತಿರುವನಂತಪುರಂ : ಬಾಳೆಗೊನೆಗಳ ಒಳಗೆ ಮಾದಕ ವಸ್ತುಗಳನ್ನು ಬಚ್ಚಿಟ್ಟು ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ 2022ರಲ್ಲಿ ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ ಪಡೆದಿದ್ದ ಧನೇಶ್ ಎಸ್. ನಾಯರ್ (31) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ನಲ್ಲಿರುವ…
ರಾಜ್ಯದ ನಿಗಮ, ಮಂಡಳಿ, ಪ್ರಾಧಿಕಾರಿಗಳಿಗೆ ನಿರ್ದೇಶಕರು, ಸದಸ್ಯರಾಗಿ 425 ಮಂದಿ ನೇಮಕ: ಕರ್ನಾಟಕ ಸರ್ಕಾರದಿಂದ ಆದೇಶ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ನಿಗಮಗಳು, ಮಂಡಳಿಗಳು ಹಾಗೂ ಅಭಿವೃದ್ಧಿ ಪ್ರಾಧಿಕಾರಗಳ ನಿರ್ದೇಶಕರು ಮತ್ತು ಸದಸ್ಯರ ನೇಮಕ ಮಾಡಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆಡಳಿತಾತ್ಮಕ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರನ್ನು ನಿಯೋಜಿಸಿದೆ. ಸಂಪೂರ್ಣ…
ಕುಶಾಲನಗರ ತಾಲೂಕು ಕಚೇರಿಗೆ ನೂತನ ತಹಶೀಲ್ದಾರ್ ರಾಗಿ ಟಿ ರಮೇಶ್ ಬಾಬು ಕರ್ತವ್ಯಕ್ಕೆ ಹಾಜರು
ಕುಶಾಲನಗರ ತಾಲೂಕು ಕಚೇರಿಗೆ ನೂತನ ತಹಶೀಲ್ದಾರರಾಗಿ ಟಿ ರಮೇಶ್ ಬಾಬು ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂಲತಹ ಮೈಸೂರು ಜಿಲ್ಲೆಯ ಟಿ ನರಸೀಪುರ ಗ್ರಾಮದ ತಿಮ್ಮಯ್ಯ ಗೌಡ ಹಾಗೂ ಯಶೋದಮ್ಮ ದಂಪತಿಯ ಪುತ್ರರಾಗಿರುವ ಇವರು ಕಳೆದ 32 ವರ್ಷಗಳಿಂದ ಸರಕಾರಿ ಅಧಿಕಾರಿಯಾಗಿ ಕೆಲಸ…
ಕಂಬಿಬಾಣೆಯಲ್ಲಿ ತಣಲ್ ಕೂಟಾಯಮ ತಂಡದವರಿಂದ ಪರಿಸರ ಸ್ವಚ್ಛತಾ ಅಭಿಯಾನ
ಸಮಾಜ ಸೇವೆಯಲ್ಲಿ ಸಾರ್ಥಕತೆ ಕಾಣುವ ವಾಟ್ಸ್ ಆಪ್ ಗ್ರೂಪ್ ತಂಡ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ “ತನಲ್ ಕೂಟಾಯಮ ವಾಟ್ಸಪ್ ಗ್ರೂಪ್” ವತಿಯಿಂದ ಕಂಬಿಬಾಣೆಯಲ್ಲಿ ಪರಿಸರ ಸ್ವಚ್ಛತಾ ಅಭಿಯಾನವನ್ನು ನವಂಬರ್ 11 ರಂದು ಏರ್ಪಡಿಸಲಾಗಿತ್ತು. ವಾಟ್ಸಪ್ ಗ್ರೂಪ್ ಗಳು ಕೇವಲ ಚಾಟಿಂಗ್ ಇನ್ನಿತರ…
ಬೆಲೆ ಏರಿಕೆ ಖಂಡಿಸಿ ಸೋಮವಾರಪೇಟೆಯಲ್ಲಿ ಜೆಡಿಎಸ್ ಪ್ರತಿಭಟನೆ, ಅಗತ್ಯ ವಸ್ತುಗಳು, ನಂದಿನಿ ಉತ್ಪನ್ನ ಹಾಗೂ ಬಸ್ ಪ್ರಯಾಣ ದರ ಇಳಿಕೆಗೆ ಆಗ್ರಹಿಸಿ ತಹಶೀಲ್ದಾರ್ಗೆ ಮನವಿ
ಸೋಮವಾರಪೇಟೆ: ಅಗತ್ಯ ವಸ್ತುಗಳ ಬೆಲೆ ಏರಿಕೆ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಹೆಚ್ಚಳ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಸೋಮವಾರಪೇಟೆ ತಾಲೂಕು ಜೆಡಿಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪುಟ್ಟಪ್ಪ…
ಕಾಂಗ್ರೆಸ್ ಸರಕಾರದ ಭರವಸೆಗಳ ಈಡೇರಿಕೆಗೆ ಆಗ್ರಹ: ನ.12ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ
ಬೆಂಗಳೂರು: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವನ್ನು ಆಗ್ರಹಿಸಿ, ‘ಕರ್ನಾಟಕದ ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ಸಂಘಟನೆಯ ವತಿಯಿಂದ ನ.12ರಂದು ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದೆ. ಬೆಂಗಳೂರಿನ…
ಸುಳ್ಯ: ಮನೆಯಂಗಳದಲ್ಲಿ ನಿಂತಿದ್ದ ಕಾರನ್ನು ರಿವರ್ಸ್ ತೆಗೆದ ಮಗ
ಕಾರಿನ ಹಿಂದೆ ನಿಂತಿದ್ದ ಅಮ್ಮನಿಗೆ ಡಿಕ್ಕಿಯಾಗಿ ಅಮ್ಮ ಮೃತ್ಯು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದುಗಲಡ್ಕ ಎಂಬಲ್ಲಿ ಮನೆಯೊಂದರಲ್ಲಿ ನಿಲ್ಲಿಸಿದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿರುವಾಗ ಕಾರಿನ ಹಿಂದೆ ನಿಂತಿದ್ದ ಅವರ ಅಮ್ಮನಿಗೆ ಕಾರು ಢಿಕ್ಕಿ ಹೊಡೆದು ಅಮ್ಮ ಮೃತಪಟ್ಟಿರುವ…
ಸುಂಟಿಕೊಪ್ಪ: ಕಂಬಿಬಾಣೆ ನಿವಾಸಿ ಸೈಯದ್ ರವರು ನಿಧನ
ಸುಂಟಿಕೊಪ್ಪ: ಕಂಬಿಬಾಣೆ ನಿವಾಸಿ ಸೈಯದ್ 72 ವರ್ಷ ಎಂಬುವರು ಹೃದಯಾಘಾತದಿಂದ ನವಂಬರ್ 11ರಂದು ನಿಧನರಾಗಿದ್ದಾರೆ.ಮೃತರು ಪತ್ನಿ ಹಾಗೂ ಪುತ್ರರು ಮತ್ತು ಪುತ್ರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
