ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಎರಡನೇ ಮದುವೆ; ಪತ್ರಕರ್ತೆ ನಿಧಿ ರಜ್ದಾನ್ ಕೈಹಿಡಿದ ಮುಖ್ಯಮಂತ್ರಿ!

ಅ.30ರಂದು ಖಾಸಗಿ ಸಮಾರಂಭದಲ್ಲಿ ವಿವಾಹ; ಮದುವೆ ಫೋಟೋ ಹಂಚಿಕೊಂಡು ಹೊಸ ಜೀವನದ ಘೋಷಣೆ – ಮೊದಲ ಪತ್ನಿ ಪಾಯಲ್ ಜೊತೆ ಜುಲೈನಲ್ಲಿ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಜೀವನದಲ್ಲಿ ಹೊಸ…

ಬೆಂಗಳೂರಿನ ಕಾನ್ರಾಡ್ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಅವಘಡ ಶಂಕೆ; ಇಬ್ಬರು ವಿದೇಶಿ ಪ್ರಜೆಗಳ ದುರ್ಮರಣ, ಇಬ್ಬರಿಗೆ ಗಾಯ

ಹಲಸೂರು: ರಾಜಧಾನಿ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಐಷಾರಾಮಿ ಕಾನ್ರಾಡ್ ಹೋಟೆಲ್‌ನ ಈಜುಕೊಳದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಜರ್ಮನಿ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ (57) ಹಾಗೂ…

ಪ್ರೇಮ ಪ್ರಕರಣ: ಯುವಕನನ್ನು ಯುವತಿಯ ಮನೆಗೆ ಕರೆದೊಯ್ದು ಹಲ್ಲೆ ಆರೋಪ; ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ

ಉಡುಪಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಯವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ಮನನೊಂದ ಯುವಕನೊಬ್ಬ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ, ಆಕೆಯ ಸಹೋದರರು…

ರಸ್ತೆ ಅಪಘಾತ ತಡೆ, ಮಾದಕ ದ್ರವ್ಯ ವಿರೋಧಿ ಜಾಗೃತಿಗಾಗಿ ಸಂಪಾಜೆಯಲ್ಲಿ ವಾಹನ ಜಾಥಾ

ಸಂಪಾಜೆ: ರಸ್ತೆ ಅಪಘಾತ ಸುರಕ್ಷತಾ ಸಪ್ತಾಹ ಹಾಗೂ ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 30ರಂದು ಸಂಪಾಜೆಯಲ್ಲಿ ವಾಹನ ಜಾಥಾ ನಡೆಯಿತು. ಸಂಪಾಜೆ ಗ್ರಾಮ ಪಂಚಾಯತ್, ಸುಳ್ಯ ತಾಲೂಕು ಇದರ ಆಶ್ರಯದಲ್ಲಿ, ಆಂಬುಲೆನ್ಸ್ ಚಾಲಕರ…

ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ನಂದಿನಿ ಮೊಸರು ದರವೂ ದುಬಾರಿ! ನವೆಂಬರ್ 1ರಿಂದ ಹೊಸ ದರ ಜಾರಿ; 1 ಲೀಟರ್ ಮೊಸರಿಗೆ ₹14 ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಮೊಸರಿನ ಬೆಲೆಯೂ ಹೆಚ್ಚಳವಾಗಿದೆ. ನವೆಂಬರ್ 1ರಿಂದ ಪರಿಷ್ಕೃತ ಹಾಲು ಮತ್ತು ಮೊಸರಿನ ದರಗಳು ಜಾರಿಗೆ ಬರಲಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ರಾಜ್ಯ ಸರ್ಕಾರವು ನಂದಿನಿ ಹಾಲಿನ…

ಉಡುಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಆತ್ಮಹತ್ಯೆ

ಪ್ರೇಮ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಯುವಕ; ಯುವತಿಯ ಮನೆಯವರಿಂದ ಹಲ್ಲೆ ಆರೋಪ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ದುರಂತ ಉಡುಪಿ: ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಗೆ ತೆರಳಿ ಗಲಾಟೆ ನಡೆಸಿದ ಆರೋಪ ಎದುರಿಸುತ್ತಿದ್ದ ಹಾಗೂ…

ಗುಲ್ವಾಡಿ ಮೆಹರಾಜ್ ಜುಮ್ಮಾ ಮಸೀದಿಗೆ ಸೇರಿದ 2.68 ಎಕರೆ ಜಾಗ ವಕ್ಫ್ ಮಂಡಳಿಗೆ ಹಸ್ತಾಂತರ ಆರೋಪ; ಜಮಾತಿನವರಿಂದ ಪ್ರತಿಭಟನೆ

ಕುಂದಾಪುರ: ಗುಲ್ವಾಡಿ ಮೆಹರಾಜ್ ಜುಮ್ಮಾ ಮಸೀದಿಗೆ ಸೇರಿದ 2.68 ಎಕರೆ ಜಾಗವನ್ನು ಜಮಾತಿನವರ ಗಮನಕ್ಕೆ ತಾರದೆ ವಕ್ಫ್ ಮಂಡಳಿಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿ, ಇದನ್ನು ವಿರೋಧಿಸಿ ಜಮಾತಿನ ಸದಸ್ಯರು ಶುಕ್ರವಾರ ಮಸೀದಿ ಬಳಿ ಪ್ರತಿಭಟನೆ ನಡೆಸಿದರು. ಸುಮಾರು ಎರಡು ವರ್ಷಗಳ ಹಿಂದೆ…

ನಾಪೋಕ್ಲುವಿನಲ್ಲಿ ಸಮಸ್ತ ಸೆಂಟಿನರಿ ಪ್ರಚಾರ ಸಮ್ಮೇಳನ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ ಸಂಸ್ಮರಣೆ

ವಿದ್ವಾಂಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಾ. ಫಾರೂಕ್ ನಈಮಿ ಅಲ್ ಬುಖಾರಿ ನಾಪೋಕ್ಲು: ಸುನ್ನೀ ಕೋರ್ಡಿನೇಷನ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವದ ಅಂಗವಾಗಿ ಸಮಸ್ತ ಸೆಂಟಿನರಿ ಪ್ರಚಾರ ಸಮ್ಮೇಳನ ಹಾಗೂ ತಾಜುಲ್ ಉಲಮಾ ಮತ್ತು…

2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; 71 ಸಾಧಕರಿಗೆ ಗೌರವ

ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; 25 ಗ್ರಾಂ ಚಿನ್ನದ ಪದಕ ಹಾಗೂ ₹5 ಲಕ್ಷ ನಗದು ಬಹುಮಾನ ಬೆಂಗಳೂರು: 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ 71 ಸಾಧಕರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.…

ರಾಪಿಡೋ ಸೇವೆ ಆರಂಭಕ್ಕೆ ವಿರೋಧ; ಮಡಿಕೇರಿಯಲ್ಲಿ ಆಟೋ, ಟ್ಯಾಕ್ಸಿ ಮಾಲೀಕ ಮತ್ತು ಚಾಲಕರ ಪ್ರತಿಭಟನಾ ಮೆರವಣಿಗೆ

ಮಡಿಕೇರಿ: ನಗರದಲ್ಲಿ ರಾಪಿಡೋ ಸೇವೆ ಆರಂಭಿಸಿರುವುದನ್ನು ವಿರೋಧಿಸಿ ಆಟೋ ಮಾಲೀಕ ಮತ್ತು ಚಾಲಕರ ಸಂಘ ಹಾಗೂ ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಎ.ವಿ. ಶಾಲೆಯಿಂದ ಆರಂಭಗೊಂಡ ಪ್ರತಿಭಟನಾ…