ಅಧ್ಯಕ್ಷೆಯಾಗಿ ತಾರಾ ಚೂಂತಾರು, ಕಾರ್ಯದರ್ಶಿಯಾಗಿ ಸತ್ಯಶಾಂತಿ ತ್ಯಾಗಮೂರ್ತಿ ಆಯ್ಕೆ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿಯ 2027ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನವೆಂಬರ್ 23ರಂದು ಸುಳ್ಯದ ಜೆಸಿ ಭವನದಲ್ಲಿ ನಡೆಯಿತು.

ಘಟಕದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಕಾಮತ್ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪೂರ್ವಾಧ್ಯಕ್ಷರಾದ ಗುರುರಾಜ್ ಅಜ್ಜಾವರ, ನವೀನ್ ಕುಮಾರ್ ಹಾಗೂ ಗುರುಪ್ರಸಾದ್ ನಾಯಕ್ ಅವರು ಚುನಾವಣಾ ಸಮಿತಿಯ ಸದಸ್ಯರಾಗಿ ಉಪಸ್ಥಿತರಿದ್ದು, ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

2027ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಜೇಸಿ ಹೆಚ್‌ಜಿಎಫ್ ತಾರಾ ಚೂಂತಾರು, ನಿಕಟಪೂರ್ವ ಅಧ್ಯಕ್ಷೆಯಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿಯಾಗಿ ಜೇಸಿ ಹೆಚ್‌ಜಿಎಫ್ ಸತ್ಯಶಾಂತಿ ತ್ಯಾಗಮೂರ್ತಿ, ಕೋಶಾಧಿಕಾರಿಯಾಗಿ ಜೇಸಿ ಪ್ರಶಾಂತ್ ಅಂಬೆಕಲ್ಲು ಹಾಗೂ ಜಂಟಿ ಕಾರ್ಯದರ್ಶಿಯಾಗಿ ಜೇಸಿ ಶೋಭಾ ಅಶೋಕ್ ಚೂಂತಾರು ಆಯ್ಕೆಯಾಗಿದ್ದಾರೆ.

ಇನ್ನು ಲೇಡಿ ಜೇಸಿ ಕೋ-ಆರ್ಡಿನೇಟರ್ ಆಗಿ ಸುನಿತಾ ರವಿಕುಮಾರ್ ಅಕ್ಕೋಜಿಪಾಲ್, ಸಪ್ತಾಹ ನಿರ್ದೇಶಕರಾಗಿ ಮಹೇಶ್ ಮೇರ್ಕಜೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರವಿಕುಮಾರ್ ಅಕ್ಕೋಜಿಪಾಲ್, ಉಮೇಶ್ ಬೊಳುಗಲ್ಲು, ಗೀತಾಂಜಲಿ ಗುರುರಾಜ್, ರಮ್ಯಾ ರಂಜಿತ್ ಕುಕ್ಕೆಟ್ಟಿ ಹಾಗೂ ಉಷಾ ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆಯೊಂದಿಗೆ ಜೇಸಿಐ ಸುಳ್ಯ ಪಯಸ್ವಿನಿಯ 2027ನೇ ಸಾಲಿನ ಕಾರ್ಯಚಟುವಟಿಕೆಗಳಿಗೆ ಹೊಸ ತಂಡ ಸಜ್ಜಾಗಿದೆ.

Leave a Reply

Your email address will not be published. Required fields are marked *