ಪರಿಸರ ಸ್ವಚ್ಛತೆಯ ಮೂಲಕ ಸಂವಿಧಾನ ದಿನ ಆಚರಣೆ; ಸಂಘಟಕರ ಕಾರ್ಯಕ್ಕೆ ಮೆಚ್ಚುಗೆ

ಸುಳ್ಯ: ಸಂವಿಧಾನ ದಿನದ ಅಂಗವಾಗಿ ಪೇರಡ್ಕ ಮುಹಿಯದ್ದೀನ್ ಜುಮಾ ಮಸೀದಿ ಹಾಗೂ SKSSF ಗೂನಡ್ಕ ಶಾಖೆಯ ವತಿಯಿಂದ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ಪೇಟೆಯಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಪರಿಸರ ಸ್ವಚ್ಛತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮವು ಬೆಳಿಗ್ಗೆ 8.30ಕ್ಕೆ ಆರಂಭಗೊಂಡಿತು. ಪೇರಡ್ಕ ಮಸೀದಿಯ ಖತೀಬರಾದ ಅಹ್ಮದ್ ನಹೀಂ ಮಅಬರಿ ಫೈಝಿ ಅವರು ದುಆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪೇರಡ್ಕ ಜಮಾಅತ್ ಅಧ್ಯಕ್ಷ ಪಿ.ಕೆ. ಉಮ್ಮರ್, ಪ್ರಧಾನ ಕಾರ್ಯದರ್ಶಿ ಉಸ್ಮಾನ್, SKSSF ಗೂನಡ್ಕ ಶಾಖೆಯ ಅಧ್ಯಕ್ಷ ಸಾಜಿದ್ ಅಝ್ಹರಿ, ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್, SKSSF ಸುಳ್ಯ ಕ್ಲಸ್ಟರ್ ಕೋಶಾಧಿಕಾರಿ ಖಲೀಲ್ ಪೇರಡ್ಕ, ಉಪಾಧ್ಯಕ್ಷರಾದ ಸಾದುಮಾನ್, ಜಿ.ಕೆ. ಹಮೀದ್, ಸಮದ್ ಫಾಶಾ, ಹಕೀಂ ದರ್ಕಾಸ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರು ಸ್ವಚ್ಛತಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಿಧಾನ ದಿನದ ಅಂಗವಾಗಿ ಪರಿಸರ ಸ್ವಚ್ಛತೆಯ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದ ಸಂಘಟಕರ ಕಾರ್ಯ ಸಾರ್ವಜನಿಕರ ಗಮನ ಸೆಳೆಯಿತು.

Leave a Reply

Your email address will not be published. Required fields are marked *